Sunday, June 7, 2026
Homeಕೊಡಗುಬಯಾಥ್ಲಾನ್ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಭವಾನಿಗೆ 2 ಬೆಳ್ಳಿ ಪದಕ

ಬಯಾಥ್ಲಾನ್ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಭವಾನಿಗೆ 2 ಬೆಳ್ಳಿ ಪದಕ

- Advertisement -
- Advertisement -

ಮಡಿಕೇರಿ: ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್ ಶಿಪ್ ನಲ್ಲಿ ಕೊಡಗು ಜಿಲ್ಲೆಯ ಭವಾನಿ ತೆಕ್ಕಡ ನಂಜುಂಡ ಅವರು ಎರಡು ಬೆಳ್ಳಿ ಪದಕ ಗಳಿಸಿದ್ದಾರೆ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಭವಾನಿ 10 ಕಿಲೋ ಮೀಟರ್ ಮತ್ತು 5 ಕಿಲೋ ಮೀಟರ್ ರೇಸ್ ನಲ್ಲಿ ಬೆಳ್ಳಿ ಗೆದ್ದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ 2022ನೇ ಸಾಲಿನ ಬಯಾಥ್ಲಾನ್ ಚಾಂಪಿಯನ್ ಶಿಪ್ ನಡೆದಿತ್ತು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸ್ಫರ್ಧಿಯೊಬ್ಬರು ವಿಂಟರ್ ಬಯಾಥ್ಲಾನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪದಕ ಗೆದ್ದಿರುವುದು ಐತಿಹಾಸಿಕ ದಾಖಲೆಯಾಗಿದೆ.

ಬಯಾಥ್ಲಾನ್ ಕ್ರೀಡೆಯು ರೈಫಲ್ ಶೂಟಿಂಗ್ ‌ಮತ್ತು ಕ್ರಾಸ್ ಕಂಟ್ರಿ ಸ್ಕೀಯಿಂಗ್ ನಿಂದ ಕೂಡಿದೆ.

- Advertisement -

Latest News

error: Content is protected !!