Sunday, May 5, 2024
Homeಕರಾವಳಿಅರಣ್ಯ ಪ್ರದೇಶದಲ್ಲಿ ನಡೆದಿತ್ತಾ ಫೈರಿಂಗ್: ಬೆಳ್ತಂಗಡಿಯಿಂದ ಸೀಜ್ ಮಾಡಿದ್ದ ರಕ್ತಚಂದನ ಮಾರಾಟ‌ ಮಾಡಿದ್ರಾ ಪೊಲೀಸರು‌?

ಅರಣ್ಯ ಪ್ರದೇಶದಲ್ಲಿ ನಡೆದಿತ್ತಾ ಫೈರಿಂಗ್: ಬೆಳ್ತಂಗಡಿಯಿಂದ ಸೀಜ್ ಮಾಡಿದ್ದ ರಕ್ತಚಂದನ ಮಾರಾಟ‌ ಮಾಡಿದ್ರಾ ಪೊಲೀಸರು‌?

spot_img
- Advertisement -
- Advertisement -

ಬೆಂಗಳೂರು : ಕಳೆದ ಆಕ್ಟೋಬರ್ ತಿಂಗಳಲ್ಲಿ ಬೆಂಗಳೂರು ರಾಮಮೂರ್ತಿ ಪೊಲೀಸ್ ಠಾಣೆಯ ಪೊಲೀಸರು ಬೆಳ್ತಂಗಡಿ ತಾಲೂಕಿನ ವೇಣೂರು ಅರಣ್ಯ ಪ್ರದೇಶದಲ್ಲಿ ಗಾಂಜಾ ಮಾರಾಟದ ಇಬ್ಬರು ಆರೋಪಿಗಳನ್ನು ಬಂಧಿಸಲು ಹೋದಾಗ ಅದರಲ್ಲಿ ಇದ್ದ ಆರೋಪಿಯೊಬ್ಬ ಪೊಲೀಸರ ಮೇಲೆ ಗುಂಡು ಹಾರಿಸಿ ಕಾಡಿನಲ್ಲಿ ಪರಾರಿಯಾಗಿದ್ದ ಎಂಬ ಆರೋಪ ಕೇಳಿ ಬಂದಿದೆ . ಅದಲ್ಲದೆ ಗಾಂಜಾದ ಜೊತೆ ರಕ್ತಚಂದ ಪತ್ತೆಯಾಗಿತ್ತು. ಪ್ರಕರಣ ದಾಖಲಿಸದೆ ಅದರಲ್ಲಿ ಕೆಲವು ರಕ್ತಚಂದನ ಮಾರಾಟ ಮಾಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ‌ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಓರ್ವ ದೂರು ನೀಡಿದ್ದು ಅದರಂತೆ ತನಿಖೆ ಮಾಡಲು ಆದೇಶ‌ ಮಾಡಲಾಗಿದೆ.

ಪ್ರಕರಣದ ದೂರಿನ ಪ್ರತಿ : ಕಳೆದ ವರ್ಷ 23/10/2021 ರಂದು ರಾತ್ರಿ 9:45 ರ ಸುಮಾರಿಗೆ ಬೆಂಗಳೂರು ರಾಮಮೂರ್ತಿ ನಗರ ಪೊಲೀಸರ್ ಇನ್ಸ್ಪೆಕ್ಟರ್ ಮೆಲ್ವಿನ್ ಫ್ರಾಸಿಸ್ ಅವರ ತಂಡದ ಪಿಎಸ್ಐ ಮೌನೇಶ್, ಪಿಎಸ್ಐ ಅರವಿಂದ್ ಕುಮಾರ್ ಮತ್ತು ಸಿಬ್ಬಂದಿಗಳಾದ ಸುನಿಲ್ ,ರಾಜಣ್ಣ, ಅಶ್ವಿನ್ ,ಚೇತನ್ ಮತ್ತು ಇತರ ಪೊಲೀಸರು ಗಾಂಜಾ ಮಾರಾಟದ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಖಾಸಗಿ ಇನೋವಾ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಆರೋಪಿಗಳ ಬಳಿ ಒಂದು ಬ್ಯಾಗ್ ಪತ್ತೆಯಾಗಿತ್ತು.

ಬ್ಯಾಗ್ ನಲ್ಲಿ 750 ಕೆ.ಜಿಯ 16 ತುಂಡು ರಕ್ತಚಂದನ ಇದರ ಮಾರುಕಟ್ಟೆ ಮೌಲ್ಯ ಸುಮಾರು 80 ಲಕ್ಷ ಆಗಿದ್ದು ಅದನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರು ರಾಮಮೂರ್ತಿ ನಗರ ಠಾಣೆಗೆ ಕಾರಿನಲ್ಲಿ ಹಾಕಿಕೊಂಡು 24/03/2021 ರಂದು ಬೆಳಗ್ಗೆ 9 ಗಂಟೆಗೆ ತಂದು ಡೈರಿಯಲ್ಲಿ ಮಾತ್ರ 16 ತುಂಡು ರಕ್ತಚಂದನ ವಶಕ್ಕೆ ಪಡೆದಿದ್ದಾಗಿ ಬರೆಯಲಾಗಿತ್ತು. ಈ ಬಗ್ಗೆ ಅಂದು ಪ್ರಕರಣ ದಾಖಲಿಸಿ ಕೊಂಡಿಲ್ಲ ಎನ್ನಲಾಗಿದೆ. ಈಗ 160 ಕೆ.ಜಿ ರಕ್ತಚಂದನ ವಶಕ್ಕೆ ಪಡೆದಿದ್ದಾಗಿ ರಾಮಮೂರ್ತಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು ಉಳಿದ ರಕ್ತಚಂದನವನ್ನು ಪೊಲೀಸರು ಮಾರಾಟ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಪೊಲೀಸರಿಗೆ ದೂರು ನೀಡಿದ ವ್ಯಕ್ತಿ: ಪ್ರಕರಣದ ಬಗ್ಗೆ ಬೆಂಗಳೂರು ನಿವಾಸಿಯಾಗಿರುವ ಜಗನ್ ಕುಮಾರ್.ಜೆ ಎಂಬವರು ದಿನಾಂಕ 16/03/2022 ರಂದು ಬೆಂಗಳೂರು ಕಮೀಷನರ್ , ಸಹಾಯಕ ಪೊಲೀಸ್ ಕಮೀಷನರ್, ಡಿ.ಜಿ&ಐಜಿಪಿ ಯವರಿಗೆ ಪ್ರಕರಣದ ಹಿನ್ನಲೆಯನ್ನು ವಿವರಿಸಿ ದೂರನ್ನು ನೀಡಿದ್ದಾರೆ.ಈ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ತನಿಖೆ ಮಾಡಲು ಡಿಸಿಪಿ ಭೀಮಾ ಶಂಕರ್ ಗುಳೇದ್ ಅವರಿಗೆ ಆದೇಶ ಮಾಡಲಾಗಿದೆ. ಅದಲ್ಲದೆ ಆರೋಪಿಗಳ ಪತ್ತೆಗೂ ಸೂಚಿಸಲಾಗಿದೆ. ತನಿಖೆಯಲ್ಲಿ ತಪ್ಪು ಕಂಡು ಬಂದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ವಿವರಿಸಿದ್ದಾರೆ.

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು : ಇನ್ನು ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್, ಪ್ರಕರಣ ನಡೆದ ದಿನ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದಿದ್ದರು. ಆರೋಪಿಗಳನ್ನು ಕೈಕೋಳ ತೊಡಿಸಿ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ 23/10/2021 ರಂದು ರಾತ್ರಿ ಖಾಸಗಿ ಇನೋವಾ ಕಾರಿನಲ್ಲಿ ಕರೆದುಕೊಂಡು ಬಂದಾಗ ಕಾಡಿನಲ್ಲಿ ಇಟ್ಟಿದ್ದ ಬ್ಯಾಗ್ ಪತ್ತೆಯಾಗಿದೆ. ಜೊತೆಗೆ ಸ್ವಲ್ವ ಗಾಂಜಾ ಜೊತೆ 750 ಕೆ.ಜಿಯ 16 ತುಂಡು ರಕ್ತಚಂದನ ಪತ್ತೆಯಾಗಿದೆ . ಇದೇ ವೇಳೆ ಪೊಲೀಸರ ಕೈಯಿಂದ ಕಾಡಿನಲ್ಲಿ ಇಬ್ಬರು ಆರೋಪಿಗಳು ಕೈಕೋಳ ಸಮೇತ ಪರಾರಿಯಾಗಿದ್ದು, ಈ ನಡುವೆ‌‌ ಆರೋಪಿ‌ಯೊಬ್ಬ ಪೊಲೀಸರ ಮೇಲೆ ಪಿಸ್ತೂಲ್‌ ನಿಂದ ಗುಂಡು ಹಾರಿಸಿದ್ದಾನೆ. ಇದರಿಂದ ಹೆದರಿದ ಪೊಲೀಸರು‌ ಆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅದಲ್ಲದೆ ಈ ಪ್ರಕರಣದಲ್ಲಿ ಓರ್ವ ಪೊಲೀಸ್ ಪೇದೆ ಆರೋಪಿಗಳ ಜೊತೆ ಶಾಮೀಲಾಗಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪೊಲೀಸರು, ಈ ಬಗ್ಗೆ ಕೂಡ ಪ್ರಾಥಮಿಕ ತನಿಖೆ ಮಾಡಲಾಗುವುದು ತಪ್ಪಾಗಿದ್ದಾರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

- Advertisement -
spot_img

Latest News

error: Content is protected !!