Thursday, June 4, 2026
Homeತಾಜಾ ಸುದ್ದಿಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ

- Advertisement -
- Advertisement -

ನವದೆಹಲಿ: ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 80 ಪೈಸೆ ಏರಿಕೆಯಾಗಿದೆ. ಅಡುಗೆ ಅನಿಲ ದರ 50 ರೂಪಾಯಿ ಹೆಚ್ಚಳವಾಗಿದೆ.

ನಾಲ್ಕೂವರೆ ತಿಂಗಳ ಬಳಿಕ ತೈಲ ದರ ಏರಿಕೆಯಾಗಿದ್ದು ನವೆಂಬರ್ ತಿಂಗಳಲ್ಲಿ ಕೊನೆಯ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿತ್ತು. 2021ರ ಅಕ್ಟೋಬರ್ ನಲ್ಲಿ ಗ್ಯಾಸ್ ದರ ಏರಿಕೆಯಾದ ಬಳಿಕ ಇಂದು ಮತ್ತೆ ಹೆಚ್ಚಳವಾಗಿದೆ.

ತೈಲ ಬೆಲೆ ಏರಿಕೆಯಿಂದ ವಾಹನ ಸವಾರರಿಗೆ ಬಿಸಿ ತಟ್ಟಲಿದೆ. ಎರಡು ದಿನಗಳ ಹಿಂದೆ ಡೀಸೆಲ್ ಸಗಟು ಮಾರಾಟ ಬೆಲೆಯಲ್ಲಿ ಹೆಚ್ಚಳ ಕಂಡಿತ್ತು.

- Advertisement -

Latest News

error: Content is protected !!