Saturday, June 6, 2026
Homeತಾಜಾ ಸುದ್ದಿ6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿಗೆ 20 ವರ್ಷ ಜೈಲು ಶಿಕ್ಷೆ

6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿಗೆ 20 ವರ್ಷ ಜೈಲು ಶಿಕ್ಷೆ

- Advertisement -
- Advertisement -

ಬೆಂಗಳೂರು: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 46 ವರ್ಷದ ಶಿಕ್ಷಕನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಕರ್ನಾಟಕ ಫಾಸ್ಟ್ ಟ್ರ್ಯಾಕ್ ಕೋರ್ಟ್ ತೀರ್ಪು ನೀಡಿದೆ. 2014ರಲ್ಲಿ ಈ ಘಟನೆ ನಡೆದಿದ್ದು, ತಿಪ್ಪಸಂದ್ರದ ನಿವಾಸಿ ಎ.ಜೈಶಂಕರ್ ಎಂಬಾತ ಇಲ್ಲಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆ ಕಲಿಸುತ್ತಿದ್ದ.

ಆ ಮಗುವಿನ ತಾಯಿಯ ದೂರಿನ ಮೇರೆಗೆ ಜೀವನ್ ಭೀಮಾ ನಗರ ಪೊಲೀಸರು ಆತನನ್ನು ಅಕ್ಟೋಬರ್ 30, 2014 ರಂದು ಪೋಕ್ಸೊ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಬಂಧಿಸಿದರು.

ಆರೋಪಿಯು ಅಕ್ಟೋಬರ್ 28, 2014 ರಂದು ಊಟದ ಸಮಯದಲ್ಲಿ ಈ ಅಪರಾಧವನ್ನು ಎಸಗಿದ್ದಾನೆ. ಮನೆಗೆ ಮರಳಿದ ನಂತರ, ಹುಡುಗಿ ತನ್ನ ತಾಯಿಗೆ ಅಸೌಖ್ಯ ಹಾಗೂ ದೈಹಿಕವಾಗಿ ನೋವು ಆಗುತ್ತಿರುವ ಬಗ್ಗೆ ಹೇಳಿದ್ದಾಳೆ. ಸಂತ್ರಸ್ತೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು ನಂತರ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ಪತ್ತೆಯಾಗಿದೆ.

ಮರುದಿನ ಈ ಘಟನೆಯ ಬಗ್ಗೆ ತಾಯಿ, ಶಿಕ್ಷಕ ಮತ್ತು ಇತರ ಸಿಬ್ಬಂದಿಯನ್ನು ಶಾಲೆಯಲ್ಲಿ ಪ್ರಶ್ನಿಸಿದಾಗ, ಅವರು ಪ್ರತಿಕ್ರಿಯಿಸಲಿಲ್ಲ. ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಆರೋಪಿಗೆ 2019ರಲ್ಲಿ ಜಾಮೀನು ಮಂಜೂರಾಗಿದ್ದು, ಇದೀಗ ಆತನನ್ನು ವಶಕ್ಕೆ ಪಡೆದು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಸಂತ್ರಸ್ತೆಯ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಅಶ್ವತ್ಥನಾರಾಯಣ ಕೆ.ವಿ ವಾದ ಮಂಡಿಸಿದ್ದಾರೆ.

- Advertisement -

Latest News

error: Content is protected !!