Saturday, June 6, 2026
Homeತಾಜಾ ಸುದ್ದಿಬೆಳ್ತಂಗಡಿ: ಆಟೋ-ಬುಲೆಟ್ ಬೈಕ್ ಪರಸ್ಪರ ಢಿಕ್ಕಿ; ರಸ್ತೆಗೆ ಎಸೆಯಲ್ಪಟ್ಟ ಸವಾರ ಗಂಭೀರ

ಬೆಳ್ತಂಗಡಿ: ಆಟೋ-ಬುಲೆಟ್ ಬೈಕ್ ಪರಸ್ಪರ ಢಿಕ್ಕಿ; ರಸ್ತೆಗೆ ಎಸೆಯಲ್ಪಟ್ಟ ಸವಾರ ಗಂಭೀರ

- Advertisement -
- Advertisement -

ಬೆಳ್ತಂಗಡಿ: ರಿಕ್ಷಾ ಹಾಗೂ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಭಸದಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಕೊಕ್ಕಡ ಸಮೀಪದ ಪಾರ್ಪಿಕಲ್ಲು ಎಂಬಲ್ಲಿ ಬುಧವಾರ ಮಾ.9 ಕ್ಕೆ ಸಂಜೆ ನಡೆದಿದೆ.


ಗಾಯಗೊಂಡವರನ್ನು ವೇಣೂರಿನ ಕಿರಣ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕಿರಣ್ ಶೆಟ್ಟಿ ದುಬೈನಲ್ಲಿ ಉದ್ಯೋಗದಲ್ಲಿದ್ದು ಕಳೆದವಾರವಷ್ಟೇ ಊರಿಗೆ ಬಂದಿದ್ದರು. ಕೊಕ್ಕಡದಲ್ಲಿದ್ದ ತನ್ನ ಸ್ನೇಹಿತನನ್ನು ಭೇಟಿಮಾಡುವ ಕಾರಣ ಆಗಮಿಸಿದ್ದರು.
ವೇಣೂರಿಗೆ ಹಿಂತಿರುಗುವಾಗ ಪಾರ್ಪಿಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಕಿರಣ್ ಶೆಟ್ಟಿಯವರ ಭುಜ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಬಳಿಕ ಕೊಕ್ಕಡ ಆಂಬುಲೆನ್ಸ್ ನಲ್ಲಿ ಉಜಿರೆಗೆ ಕರೆದುಕೊಂಡು ಹೋಗಲಾಗಿದೆ.


ಗಾಯಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!