Friday, May 3, 2024
Homeಉತ್ತರ ಕನ್ನಡಮದುವೆ ಮನೆಯಲ್ಲಿ ಎಡಗೈಯಲ್ಲಿ ಊಟ ಮಾಡಿದ ವಧು:  ಹುಡುಗಿ ಬೇಡ ಎಂದು ಬಿಟ್ಟು ಹೋದ ವರನ...

ಮದುವೆ ಮನೆಯಲ್ಲಿ ಎಡಗೈಯಲ್ಲಿ ಊಟ ಮಾಡಿದ ವಧು:  ಹುಡುಗಿ ಬೇಡ ಎಂದು ಬಿಟ್ಟು ಹೋದ ವರನ ಕಡೆಯವರು 

spot_img
- Advertisement -
- Advertisement -

ಉತ್ತರಕನ್ನಡ: ಮದುವೆಯಲ್ಲಿ ವಧು ಎಡಗೈನಲ್ಲಿ ಊಟ ಮಾಡಿದಳೆಂಬ ಕಾರಣಕ್ಕೆ ವರನ ಕಡೆಯವರೆಲ್ಲ ಸೇರಿ ಮದುಮಗಳನ್ನೇ ಬಿಟ್ಟು ಹೊರಟ ಘಟನೆ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದಲ್ಲಿ  ನಡೆದಿದೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಉದ್ರಿಕ್ತರಾದ ಸ್ಥಳೀಯರು ವರನ ಕಡೆಯವರನ್ನು ತಕ್ಷಣ ತಡೆದು ನಿಲ್ಲಿಸಿದರಲ್ಲದೆ, ವಧು-ವರರನ್ನು ಮಹಿಳಾ ಕೇಂದ್ರದ ಕಚೇರಿಗೆ ಕರೆದುಕೊಂಡು ಹೋಗಿ, ಕೌಟುಂಬಿಕ ಸಲಹೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಒಂದುಗೂಡಿಸಿದ್ದಾರೆ.

ಕುಳಗಿ ರಸ್ತೆಯ ಈಶ್ವರ ದೇವಸ್ಥಾನದಲ್ಲಿ  ವಿಕಲಚೇತನ ಯುವತಿ ಮತ್ತು ದಾಂಡೇಲಿಗೆ ಹತ್ತಿರದ ತಾಲೂಕಿನ ಯುವಕನ ಮದುವೆ ಬುಧವಾರ ಏರ್ಪಡಿಸಲಾಗಿತ್ತು. ಯುವಕ ಮಧ್ಯವರ್ತಿ ಮೂಲಕ ಯುವತಿಯನ್ನು ನೋಡಿ ಬಂದಿದ್ದ. ನೋಡಲು ಹೋದಾಗಲೇ ಯುವತಿಗೆ ಪೋಲಿಯೋ ಇರುವುದನ್ನು ಕುಟುಂಬಸ್ಥರು ತಿಳಿಸಿದ್ದರು. ಆದರೂ ಯುವಕ ಒಪ್ಪಿ ಮಾನವೀಯತೆ ಮೆರೆದಿದ್ದ. ಇದಾದ ಮೂರೇ ದಿನಕ್ಕೆ ಮಾ.9ರಂದು ಮದುವೆ ಶಾಸ್ತ್ರ ಮುಗಿಸಲಾಗಿತ್ತು. ಆದರೆ ಊಟ ಮಾಡುವ ವೇಳೆ ಆಕೆ ಎಡಗೈಯಲ್ಲಿ ಊಟ ಮಾಡುತ್ತಾಳೆ ಹುಡುಗಿ ಬೇಡ ಎಂದಿದ್ದಾರೆ ಹುಡುಗನ ಮನೆಯವರು,

ಅಲ್ಲದೇ ಮದುಮಗಳನ್ನು ಬಿಟ್ಟು ವಾಹನವನ್ನೇರಿ ಹೋಗಲು ಯತ್ನಿಸಿದ್ದಾನೆ ವರ. ಆಗ ಸ್ಥಳೀಯರು ಆತನನ್ನು ತಡೆದು ನಿಲ್ಲಿಸಿ ಪೊಲೀಸರು ಮತ್ತು ಮಹಿಳಾ ಕೇಂದ್ರಕ್ಕೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ತಿಳಿ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.

- Advertisement -
spot_img

Latest News

error: Content is protected !!