Sunday, June 7, 2026
HomeUncategorizedಬೆಂಗಳೂರು: 'ಮೇಕೆದಾಟು ಅಣೆಕಟ್ಟು' ಕಟ್ಟೋದಕ್ಕೆ ನಟ ಚೇತನ್ ವಿರೋಧ

ಬೆಂಗಳೂರು: ‘ಮೇಕೆದಾಟು ಅಣೆಕಟ್ಟು’ ಕಟ್ಟೋದಕ್ಕೆ ನಟ ಚೇತನ್ ವಿರೋಧ

- Advertisement -
- Advertisement -

ಬೆಂಗಳೂರು: ಅರಣ್ಯ ಪ್ರದೇಶವನ್ನು ನಾಶ ಮಾಡಿ, ಆ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟೋದಕ್ಕೆ ನಮ್ಮ ವಿರೋಧವಿದೆ ಎಂದು ನಟ ಚೇತನ್ ಹೇಳಿದ್ದಾರೆ.


ಇಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮೇಕೆದಾಟು ಅಣೆಕಟ್ಟನ್ನು ಹೊಸದಾಗಿ ಕಟ್ಟೋದಕ್ಕೆ ನಮ್ಮ ವಿರೋಧವಿದೆ. ಇದರಿಂದ ಅಲ್ಲಿನ ಅರಣ್ಯ ನಾಶವಾಗಲಿದೆ. ಜೀವ ಸಂಕುಲಕ್ಕೆ ಹೊಡೆತ ಬೀಳಲಿದೆ. ಜೊತೆಗೆ ಆ ಪ್ರದೇಶ ವ್ಯಾಪ್ತಿಯ ಅನೇಕ ಹಳ್ಳಿಗಳ ಜನರು ಬೀದಿ ಪಾಲಾಗಲಿದ್ದಾರೆ ಎಂದರು.


ನಾನು ಮೊದಲಿನಿಂದಲೂ ಮೇಕೆದಾಟು ಪರವಾಗಿದ್ದೇನೆ. ಆದ್ರೇ ಅಣೆಕಟ್ಟು ಕಟ್ಟೋದಕ್ಕೆ ನನ್ನ ವಿರೋಧವಿದೆ. ಜಲಸಂಪನ್ಮೂಲವನ್ನು ವೈಜ್ಞಾನಿಕವಾಗಿ ಪೋಲು ಮಾಡದಂತೆ ತಡೆಯಲು, ಕೃಷಿ, ಕುಡಿಯುವ ನೀರಿಗಾಗಿ ಸರ್ಕಾರಗಳು ವ್ಯವಸ್ಥಿತ ಯೋಜನೆಗಳನ್ನು ರೂಪಿಸಬೇಕು. ಅದರ ಹೊರತಾಗಿ ಡ್ಯಾಂಗಳ ಅವಶ್ಯಕತೆಯಿಲ್ಲ ಎಂದರು.

- Advertisement -

Latest News

error: Content is protected !!