Saturday, June 6, 2026
Homeತಾಜಾ ಸುದ್ದಿಬೆಂಗಳೂರು: ಇಂದು ರಾಜ್ಯದಲ್ಲಿ ದಾಖಲೆಯ ಕೋವಿಡ್ ಪರೀಕ್ಷೆ- ಒಟ್ಟು 28,723 ಹೊಸ ಪ್ರಕರಣ ಪತ್ತೆ, 14...

ಬೆಂಗಳೂರು: ಇಂದು ರಾಜ್ಯದಲ್ಲಿ ದಾಖಲೆಯ ಕೋವಿಡ್ ಪರೀಕ್ಷೆ- ಒಟ್ಟು 28,723 ಹೊಸ ಪ್ರಕರಣ ಪತ್ತೆ, 14 ಮಂದಿ ಸಾವು

- Advertisement -
- Advertisement -

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ಅತ್ಯಂತ ವೇಗವಾಗಿ ಹರಡುತ್ತಿದ್ದು ಇಂದು ರಾಜ್ಯದಲ್ಲಿ ಇದುವರೆಗಿನ ದಾಖಲೆ ಎಂಬಂತೆ ಅತಿ ಹೆಚ್ಚು 2.21 ಲಕ್ಷ ಪರೀಕ್ಷೆಗಳನ್ನೂ ನಡೆಸಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 28,723 ಹೊಸ ಪ್ರಕರಣಗಳು ದೃಢ ಪಟ್ಟಿವೆ. ಬೆಂಗಳೂರು ನಗರದಲ್ಲಿ 20,121 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ 12.98% ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು 3,105 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ 1,41,337 ಸಕ್ರಿಯ ಪ್ರಕರಣಗಲಿದ್ದು, ರಾಜಧಾನಿಯಲ್ಲಿ1ಲಕ್ಷದ 01ಸಾವಿರ ಪ್ರಕರಣಗಳಿವೆ.

ಇಂದು ರಾಜ್ಯದಲ್ಲಿ ಒಟ್ಟು 14 ಮಂದಿ ಸೋಂಕಿತರು ಸಾವನ್ನಪ್ಪಿದ್ದು, 07 ಮಂದಿ ಬೆಂಗಳೂರಿನವರಾಗಿದ್ದಾರೆ. ಇಂದು 2,21,205 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ನಾಳೆ ಹೆಚ್ಚಿನ ಪ್ರಕರಣಗಳ ಆತಂಕ ಎದುರಾಗಿದೆ.

- Advertisement -

Latest News

error: Content is protected !!