Friday, June 26, 2026
Homeಕರಾವಳಿಬೆಳ್ತಂಗಡಿ: ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್, ಶ್ರೀ ಗುರುದೇವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಧನೆ !

ಬೆಳ್ತಂಗಡಿ: ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್, ಶ್ರೀ ಗುರುದೇವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಧನೆ !

- Advertisement -
- Advertisement -

ಬೆಳ್ತಂಗಡಿ: ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್-ಮಾಜಿ ಶಾಸಕ ಕೆ ವಸಂತ ಬಂಗೇರ ಅಧ್ಯಕ್ಷತೆಯ ಬೆಳ್ತಂಗಡಿ ಶ್ರೀ ಗುರುದೇವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ.

6ನೇ ವರ್ಷದ ಆಲ್ ಇಂಡಿಯ ಕರಾಟೆ ಚಾಂಪಿಯನ್ ಶಿಪ್, ಎಂ ಕೆ ಅನಂತರಾಜು ಕಾಲೇಜ್ ಆಫ್ ಫಿಜಿಕಲ್ ಎಜುಕೇಶನ್ ಮೂಡುಬಿದ್ರಿ ಇದರ ಆಶ್ರಯದಲ್ಲಿ ಜರುಗಿತು, ಇದರಲ್ಲಿ ಬೆಳ್ತಂಗಡಿಯ ಶ್ರೀ ಗುರುದೇವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮೆರೆದಿದ್ದು

ಯುವರಾಜ್ 2 ಚಿನ್ನ, ಶ್ರವಣ್ 2 ಚಿನ್ನ, ರಕ್ಷಾ 1 ಚಿನ್ನ 1 ರಜತ, ಇರ್ಫಾನ್ 1 ಚಿನ್ನ 1 ಕಂಚು, ಶಾ ಕಮಾಲ್ 2 ಕಂಚು, ವಿಜೇತರುಗಳಾಗಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

ಈ ದಿನ ಸಂಸ್ಥೆಯ ಅಧ್ಯಕ್ಷರು ಬೆಳ್ತಂಗಡಿಯ ಮಾ ಜಿ ಶಾಸಕರಾದ ಶ್ರೀ ಕೆ ವಸಂತ ಬಂಗೇರರವರು ವಿಜೇತ ವಿಧ್ಯಾರ್ಥಿಗಳನ್ನು ಗೌರವಿಸಿದರು ಹಾಗೂ ಎಲ್ಲಾ ರೀತಿಯ ನೆರವು,ಸಹಕಾರ ನೀಡುವ ಭರವಸೆಯಿತ್ತರು.

ಈ ಸಂದರ್ಭ ವಿದ್ಯಾಸಂಸ್ಥೆಯ ಪ್ರಾಂಶುಪಾಲರು,ದೈಹಿಕ ಶಿಕ್ಷಣ ಶಿಕ್ಷಕರುಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!