Friday, June 5, 2026
Homeಇತರಮನೆಯಿಂದ ಹೊರ ಹೋದ ಯುವತಿ ನಾಪತ್ತೆ- ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಮನೆಯಿಂದ ಹೊರ ಹೋದ ಯುವತಿ ನಾಪತ್ತೆ- ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಕಡಬ: ಮನೆಯಿಂದ ಹೊರಹೋದ ಯುವತಿಯೊಬ್ಬಳು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಕೋಡಿಂಬಾಳ ಗ್ರಾಮದ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯಾ(22) ಎಂದು ಗುರುತಿಸಲಾಗಿದೆ.

ಬುಧವಾರದಂದು ಮನೆಯಿಂದ ಹೊರಹೋದ ದಿವ್ಯಾ ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ಸಂಬಂಧಿಕರಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಿದಾಗ ಯಾವುದೇ ಸುಳಿವು ಪತ್ತೆಯಾಗದ ಕಾರಣ ಆಕೆಯ ತಂದೆ ಕಡಬ ಠಾಣೆಯಲ್ಲಿ ದೂರು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!