Saturday, June 6, 2026
Homeಕರಾವಳಿಉಡುಪಿಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳಕ್ಕೆ 5 ಪ್ರಶಸ್ತಿಗಳು !

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳಕ್ಕೆ 5 ಪ್ರಶಸ್ತಿಗಳು !

- Advertisement -
- Advertisement -

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳಕ್ಕೆ 5 ಪ್ರಶಸ್ತಿಗಳು ಲಭಿಸಿವೆ. ಈ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಭಾಗವಹಿಸಿದ 600 ಯೋಗ ಪಟುಗಳಲ್ಲಿ ಪ್ರಶಸ್ತಿ ವಿಜೇತ 13 ಭಾರತೀಯರಲ್ಲಿ ಕರ್ನಾಟಕದ 8 ಯೋಗ ಪಟುಗಳು ಪ್ರಶಸ್ತಿ ಪಡೆದಿದ್ದು, ಇದರಲ್ಲಿ ಕಾರ್ಕಳ ಕ್ಷೇತ್ರದ 5 ಯೋಗ ಪಟುಗಳು ಇರುವುದು ಹೆಮ್ಮೆ.

2021ನೇ ಸಾಲಿನ ಮಲೇಷಿಯಾ ಸರ್ಕಾರ ವತಿಯಿಂದ ನಡೆದ ಟ್ರಾಕ್ಸ್ ಯೋಗಾಸನ ಸ್ಪರ್ಧೆಯಲ್ಲಿ ಅನ್ವಿ ಹೆಚ್ ಅಂಚನ್ 12 ವರ್ಷ ವಯೋಮಿತಿಯ ಒಳಗಿನ ಆರ್ಟಿಸ್ಟಿಕ್ ಸೋಲೋ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೆ.ನರೇಂದ್ರ ಕಾಮತ್ 45 ವರ್ಷ ಮೇಲ್ಪಟ್ಟ ವಯೋಮಿತಿಯ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮಮತಾ 36 ರಿಂದ 45 ವಯೋಮಿತಿಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಶಿಲ್ಪಾ 36 ರಿಂದ 45 ವರ್ಷ ವಯೋಮಿತಿಯಲ್ಲಿ ತೃತೀಯ ಸ್ಥಾನ ಹಾಗೂ ಶಿವಾನಿ ಅತ್ಯಂತ ಕಿರಿಯ ವಯಸ್ಸು 10 ವರ್ಷದ ಒಳಗಿನ ವಯೋಮಿತಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

- Advertisement -

Latest News

error: Content is protected !!