Saturday, June 6, 2026
HomeUncategorizedಬೆಳ್ತಂಗಡಿಯ ಲಾಯಿಲ ಗ್ರಾಮದ ಕನ್ನಾಜೆ ಸಮೀಪ ವ್ಯಕ್ತಿ ಆತ್ಮಹತ್ಯೆ

ಬೆಳ್ತಂಗಡಿಯ ಲಾಯಿಲ ಗ್ರಾಮದ ಕನ್ನಾಜೆ ಸಮೀಪ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಲಾಯಿಲ ಗ್ರಾಮದ ಕನ್ನಾಜೆ ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಲಾಯಿಲ ಗ್ರಾಮದ ಕನ್ನಾಜೆ ನಿವಾಸಿ ಪ್ರವೀಣ್ ಶೆಟ್ಟಿ (38 ಆತ್ಮಹತ್ಯೆಗೆ ಶರಣಾದವರು.

ಪ್ರವೀಣ್ ಶೆಟ್ಟಿ ನಿನ್ನೆ  ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದು ಬೆಳಗ್ಗೆ ಕೋಣೆಯ ಬಾಗಿಲು ತೆರೆಯದೆ ಇದ್ದಾಗ ಪತ್ನಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ತಕ್ಷಣ ಹತ್ತಿರದ ಮನೆಯಲ್ಲಿ  ಇದ್ದ ತಮ್ಮನಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಇಣುಕಿ ನೋಡಿದಾಗ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು  ಕಂಡುಬಂದಿದೆ . ಗಾರೆ ಕೆಲಸ ಮಾಡುತಿದ್ದ ಇವರು ಕಳೆದ ಒಂದು ವರುಷದ ಹಿಂದೆ ಹೊಸ ಮನೆ ಕಟ್ಟಿ ಹೆಂಡತಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು .ಕಳೆದ ಒಂದು ವಾರಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ  ಇದ್ದರು ಎನ್ನಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.  ಬೆಳ್ತಂಗಡಿ ಪೊಲೀಸರು  ಸ್ಥಳಕ್ಕೆ  ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!