Monday, May 20, 2024
Homeಕರಾವಳಿಉಡುಪಿ7ನೇ ಬಾರಿಗೆ ವಿಶ್ವದಾಖಲೆ ಬರೆದ ತನುಶ್ರೀ ಪಿತ್ರೋಡಿ : ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್...

7ನೇ ಬಾರಿಗೆ ವಿಶ್ವದಾಖಲೆ ಬರೆದ ತನುಶ್ರೀ ಪಿತ್ರೋಡಿ : ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ 13 ವರ್ಷದ ಬಾಲಕಿ ಹೆಸರು!

spot_img
- Advertisement -
- Advertisement -

ಉಡುಪಿ: ಅತೀ ಕಡಿಮೆ ಅವಧಿಯಲ್ಲಿ ಅತೀಹೆಚ್ಚು ಯೋಗಾಸನ ಭಂಗಿಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ ಉಡುಪಿಯ 13 ವರ್ಷದ ಬಾಲಕಿ ತನುಶ್ರೀ ಪಿತ್ರೋಡಿಯವರು ದಾಖಲೆ ಬರೆದಿದ್ದಾರೆ.

ಗೋಲ್ಡನ್ ಬುಕ್‌ ಆಫ್‌ ರೆಕಾರ್ಡ್ ಮುಖ್ಯಸ್ಥರು ಒಂದು ಗಂಟೆಯ ಅವಧಿ ಕೊಟ್ಟು 200 ಯೋಗ ಭಂಗಿ ಪ್ರದರ್ಶಿಸುವ ಗುರಿ ನೀಡಿದ್ದರು. ಆದರೆ ತನುಶ್ರೀ ಕೇವಲ 43 ನಿಮಿಷ 18ಸೆಕೆಂಡ್ ಅವಧಿಯಲ್ಲೇ 245 ಭಂಗಿ ಲೀಲಾಜಾಲವಾಗಿ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ.

ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತನುಶ್ರೀ ವಿಶ್ವ ದಾಖಲೆಯ ಸಾಧನೆ ಮಾಡಿದ್ದಾರೆ, ಒಂದು ಗಂಟೆಯೊಳಗೆ ಕನಿಷ್ಠ 200 ಅಸನಗಳನ್ನು ಪ್ರದರ್ಶಿಸಬೇಕು ಎಂಬ ಗುರಿಯನ್ನು ಸಂಸ್ಥೆ ನೀಡಿತ್ತು. ಕಠಿಣ ಸವಾಲು ಸ್ವೀಕರಿಸಿದ ತನುಶ್ರೀ ನಿಗದಿತ ಅವಧಿಗೂ ಮುನ್ನವೇ ಗುರಿಮುಟ್ಟಿ ದಾಖಲೆ ನಿರ್ಮಿಸಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮುಖ್ಯಸ್ಥ ವೈಷ್ಣವ್ ಮನೀಷ್ ಮಾತನಾಡಿ, ‘ಅತ್ಯಂತ ಕಠಿಣವಾದ ಯೋಗಾಸನ ಭಂಗಿಗಳನ್ನು ಲೀಲಾಜಾಲವಾಗಿ ಪ್ರದರ್ಶನ ಮಾಡಿರುವ ತನುಶ್ರೀ ಪಿತ್ರೋಡಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ. ಆಕೆಯ ಸಾಧನೆ 100 ದಾಖಲೆಗಳಿಗೆ ಸಮ. ಸದ್ಯ ಸಂಸ್ಥೆಯ ಕಡೆಯಿಂದ ತಾತ್ಕಾಲಿಕ ಪ್ರಮಾಣಪತ್ರ ವಿತರಿಸಲಾಗುತ್ತಿದ್ದು, ಶೀಘ್ರವೇ ಮೂಲ ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.

ತನುಶ್ರೀ ಪಿತ್ರೋಡಿಯವರ 7ನೇ ವಿಶ್ವದಾಖಲೆ ಇದಾಗಿದ್ದು,2017ರಲ್ಲಿ ತನುಶ್ರೀ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದರು . 2018ರಲ್ಲಿ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ನಿಮಿಷಕ್ಕೆ 41 ಬಾರಿ ತಿರುಗಿಸುವ ಮೂಲಕ ಇನ್ನೊಂದು ಗಿನ್ನೆಸ್ ದಾಖಲೆ ಬರೆದಿದ್ದರು . ಧನುರ್ ಆಸನದಲ್ಲಿ ಎರಡು ಬಾರಿ, ಚಕ್ರಾಸನ ರೇಸ್ ವಿಭಾಗ ಮತ್ತು ಮೋಸ್ಟ್ ಬಾಡಿ ಸ್ಕಿಪ್ ವಿಭಾಗಗಳಲ್ಲಿ ಮಾಡಿರುವ ಸಾಧನೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಈಗ ದಾಖಲಾಗಿರೋದು ಏಳನೇ ವಿಶ್ವದಾಖಲೆ ಅನ್ನೋದು ಈಕೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

- Advertisement -
spot_img

Latest News

error: Content is protected !!