Saturday, June 6, 2026
Homeಕರಾವಳಿಚಿಕ್ಕಮಗಳೂರು: ಓಮ್ನಿ ಕಾರಿನ ಮೇಲೆ ಒಂಟಿ ಸಲಗ ದಾಳಿ;ನಾಲ್ವರಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಓಮ್ನಿ ಕಾರಿನ ಮೇಲೆ ಒಂಟಿ ಸಲಗ ದಾಳಿ;ನಾಲ್ವರಿಗೆ ಗಂಭೀರ ಗಾಯ

- Advertisement -
- Advertisement -

ಚಿಕ್ಕಮಗಳೂರು: ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದ ಘಟನೆ ಚಿಕ್ಕಮಗಳೂರಿನ ಕುಂದೂರು ಸಾರಗೋಡು ರಸ್ತೆಯಲ್ಲಿ ನಡೆದಿದೆ.

ವಾಹನವನ್ನು ಎಳೆದಾಡಿ ಪುಡಿ ಮಾಡಿದ್ದು,ಸದ್ಯ ಪ್ರಯಾಣಿಕರು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದಾಳಿಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರಗೆ ರವಾನಿಸಲಾಗಿದೆ. ಮಾರುತಿ ಓಮ್ನಿ ಕಾರು ಸಂಪೂರ್ಣ ಜಖಂ ಆಗಿದೆ.

ಇನ್ನು ಪ್ರಯಾಣಿಕರೆಲ್ಲರೂ ಚಿಕ್ಕಮಗಳೂರಿನ ಜೋಳ್ ದಾಳ್ ಮೂಲದವರಾಗಿದ್ದು,ಶೃಂಗೇರಿ ಹಾಗೂ ಹೊರನಾಡು ದೇವಸ್ಥಾನಕ್ಕೆ ಇಂದು ಬೆಳಗ್ಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಈಗ ಪ್ರಯಾಣಿಸುತ್ತಿದ್ದ ಓಮಿನಿ ಮೇಲೆ ಒಂಟಿ ಸಲಗ ದಾಳಿ ನಡೆಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!