Saturday, June 6, 2026
Homeತಾಜಾ ಸುದ್ದಿದೇಶದಲ್ಲಿ ಹಕ್ಕಿ ಜ್ವರಕ್ಕೆ ಮೊದಲ ಬಲಿ: 12 ವರ್ಷದ ಬಾಲಕನಿಗೆ ತಗುಲಿದ ಎಚ್5ಎನ್1 !!

ದೇಶದಲ್ಲಿ ಹಕ್ಕಿ ಜ್ವರಕ್ಕೆ ಮೊದಲ ಬಲಿ: 12 ವರ್ಷದ ಬಾಲಕನಿಗೆ ತಗುಲಿದ ಎಚ್5ಎನ್1 !!

- Advertisement -
- Advertisement -

ನವದೆಹಲಿ: ಹಕ್ಕಿ ಜ್ವರದಿಂದ ಸಾವನ್ನಪ್ಪಿರುವ ಮೊದಲ ಪ್ರಕರಣ ದೆಹಲಿಯ ಏಮ್ಸ್ ನಲ್ಲಿ ವರದಿಯಾಗಿದೆ. ಈ ವರ್ಷದ ಮೊದಲ ಸಾವಿನ ಪ್ರಕರಣ ಇದಾಗಿದ್ದು, ಏಮ್ಸ್ ನ ಪೀಡಿಯಾಟ್ರಿಕ್ ವಿಭಾಗದಲ್ಲಿ ಎಚ್5ಎನ್1 ಏವಿಯನ್ ಫ್ಲೂ ಗೆ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕ ಮೃತಪಟ್ಟಿದ್ದಾರೆ.

ಮೊದಲಿಗೆ ಬಾಲಕನಿಗೆ ಕೋವಿಡ್-19 ಸೋಂಕು ತಗುಲಿರಬೇಕು ಎಂದು ವೈದ್ಯರು ಸಂಶಯಪಟ್ಟಿದ್ದು ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಆದರೆ ಆಳವಾದ ಸಂಶೋಧನೆ ಕೈಗೊಂಡಾಗ ಹಕ್ಕಿಜ್ವರಕ್ಕೆ ಕಾರಣವಾಗುವ ಇನ್‍ಫ್ಲುಯೆಂಜಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಜು.20ರ ಮಂಗಳವಾರ ಸಾವನ್ನಪ್ಪಿದ್ದಾನೆ.

ನ್ಯುಮೋನಿಯಾ ಹಾಗೂ ರಕ್ತಕ್ಯಾನ್ಸರ್ ನಿಂದ ಬಳಲುತ್ತಿದ್ದ ಈ ಬಾಲಕನಿಗೆ ಏಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಾಲಕನ ಸಂಪರ್ಕಕ್ಕೆ ಬಂದಿದ್ದ ಸಿಬ್ಬಂದಿಗಳು ತಮ್ಮ ಆರೋಗ್ಯ ಹಾಗೂ ಲಕ್ಷಣಗಳ ಬಗ್ಗೆ ನಿಗಾ ವಹಿಸಬೇಕೆಂದು ಏಮ್ಸ್ ಅಧಿಕಾರಿಗಳು ಹೇಳಿದ್ದಾರೆ.

- Advertisement -

Latest News

error: Content is protected !!