Friday, June 5, 2026
HomeWorldಟೋಕಿಯೋ ಒಲಿಂಪಿಕ್ಸ್: ಸೋಂಕು ಹೆಚ್ಚಾದರೆ ಪಂದ್ಯ ರದ್ದಾಗುವ ಭೀತಿ ಇನ್ನು ಇದೆ; ಆಯೋಜಕರು

ಟೋಕಿಯೋ ಒಲಿಂಪಿಕ್ಸ್: ಸೋಂಕು ಹೆಚ್ಚಾದರೆ ಪಂದ್ಯ ರದ್ದಾಗುವ ಭೀತಿ ಇನ್ನು ಇದೆ; ಆಯೋಜಕರು

- Advertisement -
- Advertisement -

ಜಪಾನ್: ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಪಂದ್ಯಾವಳಿ ರದ್ದು ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಟೋಕಿಯೋ ಒಲಿಂಪಿಕ್​​ ಮುಖ್ಯಸ್ಥರು ಪರೋಕ್ಷವಾಗಿ ಹೌದು ಎಂಬ ಉತ್ತರವನ್ನು ನೀಡುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ ರದ್ದಾಗುವ ಭೀತಿ ಇನ್ನೂ ಇದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದ ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಪಂದ್ಯಗಳು ರದ್ದಾಗಬಹುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟೋಕಿಯೋ ಒಲಿಂಪಿಕ್ಸ್ ಮುಖ್ಯಸ್ಥ ಟೊಶಿರೋ ಮುಟೋ ಕೊರೋನಾ ವೈರಸ್ ಹಬ್ಬುವಿಕೆ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಕೊನೆ ಕ್ಷಣದಲ್ಲಿ ಬೇಕಿದ್ದರೂ ಕ್ರೀಡಾಕೂಟ ರದ್ದಾಗಬಹುದು . ಸೋಂಕು ಕಡಿಮೆಯೂ ಆಗಬಹುದು, ಜಾಸ್ತಿಯೂ ಆಗಬಹುದು. ಏನನ್ನೂ ಊಹಿಸಲು ಸಾಧ್ಯವಾಗುತ್ತಿಲ್ಲ. ಸೋಂಕು ಹೆಚ್ಚಾದರೆ ಚರ್ಚೆ (ಕ್ರೀಡಾಕೂಟ ರದ್ದುಗೊಳಿಸುವ ಬಗ್ಗೆ) ನಡೆಸಲಿದ್ದೇವೆ ಎಂದಿದ್ದಾರೆ.

- Advertisement -

Latest News

error: Content is protected !!