Monday, June 8, 2026
Homeಕ್ರೀಡೆಅಕ್ರಮವಾಗಿ ಚಿನ್ನ ಸಾಗಾಟ:ಭಾರತದ ಖ್ಯಾತ ಕ್ರಿಕೆಟಿಗ ಬಂಧನ

ಅಕ್ರಮವಾಗಿ ಚಿನ್ನ ಸಾಗಾಟ:ಭಾರತದ ಖ್ಯಾತ ಕ್ರಿಕೆಟಿಗ ಬಂಧನ

- Advertisement -
- Advertisement -

ಮುಂಬೈ : ಮಾಹಿತಿ ನೀಡದೇ ಚಿನ್ನ ಸಾಗಾಟ ಆರೋಪದಲ್ಲಿ ಕ್ರಿಕೆಟಿಗ ಕೃಣಾಲ್ ಪಾಂಡ್ಯರನ್ನು ಮುಂಬೈನ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಡೈರೆಕ್ಟ್ ಆಫ್ ರೆವೆನ್ಯೂ ಇಂಟಲಿಜೆನ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೃಣಾಲ್ ಪಾಂಡ್ಯ ಅವರು ದುಬೈ ನಿಂದ ನಿನ್ನೆ ಮಧ್ಯಾಹ್ನ ಮುಂಬೈ ಏರ್ ಪೋರ್ಟ್ ಗೆ ಬಂದಿಳಿದಿದ್ದರು. ಪಾಂಡ್ಯಾರ ಬಳಿ ಒಟ್ಟು 75 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಇದ್ದವು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡದೇ ಚಿನ್ನ ಸಾಗಾಟದ ಆರೋಪದಲ್ಲಿ ಮುಂಬೈ ಪೊಲೀಸರು ಕೃಣಾಲ್ ಪಾಂಡ್ಯ ಅವರನ್ನು ವಶಕ್ಕೆ ಪಡೆದಿದ್ದು, ಇನ್ನೂ ಸಹ ಬಿಡುಗಡೆ ಮಾಡಿಲ್ಲ ಎಂದು ವರದಿಯಾಗಿದೆ.

- Advertisement -

Latest News

error: Content is protected !!