Wednesday, June 24, 2026
Homeಕರಾವಳಿಮಾ.24ರಿಂದ 28ರವರೆಗೆ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ

ಮಾ.24ರಿಂದ 28ರವರೆಗೆ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ

- Advertisement -
- Advertisement -

ಮಂಗಳೂರು; ಕಶಾರ್ಪ್ ಫಿಟ್ನೆಸ್ ವತಿಯಿಂದ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಮಾ.24ರಿಂದ 28ರವರೆಗೆ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ.

ಈ ಕ್ರೀಡಾಕೂಟವು ಐದು ದಿನಗಳ ಕಾಲ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ರಾಜ್ಯಗಳ 300ಕ್ಕೂ ಅಧಿಕ ಪುರುಷ ಹಾಗೂ ಮಹಿಳಾ ಪವರ್ ಲಿಫ್ಟರ್‌ಗಳು ಭಾಗವಹಿಸಲಿದ್ದು, , ಮಾ.24ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಸ್ಪರ್ಧೆಯಲ್ಲಿ ಸ್ಕ್ವಾಟ್, ಬೆಂಚ್‌ಪ್ರೆಸ್ ಮತ್ತು ಡೆಡ್‌ಲಿಫ್ಟ್ ವಿಭಾಗಗಳಿದ್ದು . ಈ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರು ಲಿಥುವೇನಿಯಾದಲ್ಲಿ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಲಿದ್ದಾರೆ ಎಂದು ಚಾಂಪಿಯನ್‌ಶಿಪ್‌ನ ನಿರ್ದೇಶಕರಾದ ಸತೀಶ್ ಕುಮಾರ್ ಕುದ್ರೋಳಿ ತಿಳಿಸಿದ್ದಾರೆ.

ಸುದ್ದಿ ಗೋಷ್ಟಿಯಲ್ಲಿ ಸಂಘಟನಾ ಸಮಿತಿಯ ಉಮೇಶ್ ಗಟ್ಟಿ, ಜಯರಾಂ ಶೆಟ್ಟಿಗಾರ್, ಮಧುಚಂದ್ರ ಎಂ., ಕಶಾರ್ಪ್ ಫಿಟ್ನೆಸ್ ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಡಾ. ಸಾವಿಲ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!