Wednesday, June 3, 2026
Homeತಾಜಾ ಸುದ್ದಿಯಕ್ಷಗಾನದ ಹಿರಿಯ ಕಲಾವಿದ ‘ಸಾಮಗೆರ್‌’ ಇನ್ನು ನೆನಪು ಮಾತ್ರ!..

ಯಕ್ಷಗಾನದ ಹಿರಿಯ ಕಲಾವಿದ ‘ಸಾಮಗೆರ್‌’ ಇನ್ನು ನೆನಪು ಮಾತ್ರ!..

- Advertisement -
- Advertisement -

ಉಡುಪಿ: ಯಕ್ಷಗಾನದ ಅಪೂರ್ವ ತಾರೆ ಹಿರಿಯ ಕಲಾವಿದ, ಕೋಟೇಶ್ವರ ನಿವಾಸಿ ವಾಸುದೇವ ಸಾಮಗ (71) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ.ಸಂಯಮ ಎಮಬ ಸಂಸ್ಥೆ ಮೂಲಕ ತಾಳಮದ್ದಳೆಗೆ ಹೊಸ ಆಯಾಮ ಬರೆದ ಇವರು ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳ(ಸುರತ್ಕಲ್), ಸಾಲಿಗ್ರಾಮ ಮೇಳದ ಪ್ರಮುಖ ವೇಷಧಾರಿಯಾಗಿ ಪಾತ್ರ ನಿರ್ವಹಿಸಿದವರು .

ಇವರು ತಾಳಮದ್ದಲೆಯಲ್ಲಿ ಇದ್ದಾರೆಂದರೆ ಅದು ಜನಾಕರ್ಷಣೆಯ ವಿಷಯವಾಗುತ್ತಿತ್ತು. ವಾಸುದೇವ ಸಾಮಗ ತನ್ನ ಅದ್ಭುತ ಸಾಧನೆಯಿಂದ ಯಕ್ಷಗಾನ ರಂಗದಲ್ಲಿ ‘ಸಾಮಗೆರ್‌’ ಎಂದು ಪ್ರಸಿದ್ಧಿ ಪಡೆದಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

- Advertisement -

Latest News

error: Content is protected !!