Saturday, June 6, 2026
Homeಕರಾವಳಿಮಂಗಳೂರಿನಲ್ಲಿ ರಸ್ತೆ ಅಪಘಾತ: ಬೆಳ್ತಂಗಡಿ ಮೂಲದ ವ್ಯಕ್ತಿಯ ಕಾರನ್ನು ಬಲು ದೂರ ಎಳೆದೊಯ್ದ ಲಾರಿ

ಮಂಗಳೂರಿನಲ್ಲಿ ರಸ್ತೆ ಅಪಘಾತ: ಬೆಳ್ತಂಗಡಿ ಮೂಲದ ವ್ಯಕ್ತಿಯ ಕಾರನ್ನು ಬಲು ದೂರ ಎಳೆದೊಯ್ದ ಲಾರಿ

- Advertisement -
- Advertisement -

ಮಂಗಳೂರು: ನಗರದ ನಂತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಂಟೈನರ್ ಲಾರಿಯೊಂದು ಕಾರಿಗೆ ಗುದ್ದಿ ಕಾರನ್ನು ಸ್ವಲ್ಪ ದೂರ ಎಳೆದೊಯ್ದ ಘಟನೆ ಇಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಣೆಕ್ಕರ ನಿವಾಸಿ ಪುರಂದರ ಶೆಟ್ಟಿ ತನ್ನ ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಗುದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ.

ಅಪಘಾತದಿಂದ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ತೊಡಕು ಉಂಟಾಗಿತ್ತು. ನಂತರ ಮದ್ಯ ಪ್ರವೇಶಿಸಿದ ಕದ್ರಿ ಪೊಲೀಸರು ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

- Advertisement -

Latest News

error: Content is protected !!