Saturday, June 6, 2026
Homeತಾಜಾ ಸುದ್ದಿಸಂಜನಾ-ರಾಗಿಣಿ ಜಾಮೀನು ಅರ್ಜಿ ವಜಾ: ಡ್ರಗ್ಸ್ ರಾಣಿಯರಿಗೆ ಜೈಲೇ ಗತಿ....

ಸಂಜನಾ-ರಾಗಿಣಿ ಜಾಮೀನು ಅರ್ಜಿ ವಜಾ: ಡ್ರಗ್ಸ್ ರಾಣಿಯರಿಗೆ ಜೈಲೇ ಗತಿ….

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ರಾಗಿಣಿ ಹಾಗೂ ಸಂಜನಾ ಅವರು ಇವತ್ತು ಜಾಮೀನಿನ ನಿರೀಕ್ಷೆಯಲ್ಲಿದ್ದರು. ಅರವರ ನಿರೀಕ್ಷೆ ಹುಸಿಯಾಗಿದೆ.  ಇವತ್ತು  ಹೈಕೋರ್ಟ್ ನಲ್ಲಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಆದರೆ ಅವರ ಜಾಮೀನು ಅರ್ಜಿ ವಜಾಗೊಂಡಿದೆ.

 ಹೌದು.. ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ತಿರಸ್ಕರಿಸಿದೆ. ಜಾಮೀನು ಕೋರಿ ರಾಗಿಣಿ, ಸಂಜನಾ ಹಾಗೂ ಇತರೆ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ, ಅಕ್ಟೋಬರ್ 24 ರಂದು ತೀರ್ಪು ಕಾಯ್ದಿರಿಸಿದ್ದರು.

ಇಂದು ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದಾರೆ. ಇದರಿಂದ ಜಾಮೀನು ನಿರೀಕ್ಷೆಯಲ್ಲಿದ್ದ ನಟಿಯವರಿಗೆ ತೀವ್ರ ನಿರಾಶೆಯಾಗಿದೆ. ಕಳೆದ ಎರಡು ತಿಂಗಳಿಂದ ಜೈಲಿನಲ್ಲಿರುವ ನಟಿಯರು ಈಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

- Advertisement -

Latest News

error: Content is protected !!