Saturday, June 6, 2026
Homeಕರಾವಳಿಮಂಗಳೂರು ವಿಶ್ವವಿದ್ಯಾನಿಲಯ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ, ಪ್ರೊ.ಅರಬಿ ಸೇವೆಯಿಂದ ವಜಾ

ಮಂಗಳೂರು ವಿಶ್ವವಿದ್ಯಾನಿಲಯ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ, ಪ್ರೊ.ಅರಬಿ ಸೇವೆಯಿಂದ ವಜಾ

- Advertisement -
- Advertisement -

ಕೊಣಾಜೆ: 2018ರಲ್ಲಿ ಮಂಗಳೂರು ವಿವಿಯ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪ್ರೊ. ಆರಬಿಯನ್ನು ಸೇವೆಯಿಂದ ವಜಾ ಮಾಡಲು ವಿವಿಯ ಸಿಂಡಿಕೇಟ್ ಸಭೆ ತೀರ್ಮಾನಿಸಿದೆ.

ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಅರಬಿಯವರು ಎರಡು ವರ್ಷಗಳ ಹಿಂದೆ ವಿವಿಯ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಸಾಕ್ಷಿ ಸಮೇತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ನಂತರ ದೌರ್ಜನ್ಯದ ಕುರಿತು ವಿವಿ ಆಂತರಿಕ ತನಿಖಾ ಸಮಿತಿ ತನಿಖೆ ನಡೆಸಿ ಹಿಂದಿನ ಕುಲಸಚಿವ ಪ್ರೊ. ಎ.ಎಂ. ಖಾನ್ ಅವರಿಗೆ ಸಲ್ಲಿಸಲಾಗಿತ್ತು.

ಆದರೆ ಕುಲಸಚಿವ ಪ್ರೊ. ಎ.ಎಂ. ಖಾನ್ ವರದಿಯನ್ನು ತೆರೆಯದೆ ಹಾಗೆಯೆ ಮುಚ್ಚಿಟ್ಟಿದ್ದರು. ಇತ್ತೀಚಿಗೆ ಮಹಿಳಾ ಆಯೋಗ ವರದಿ ಕೇಳಿದ್ದರಿಂದ ವಿವಿ ಸಿಂಡಿಕೇಟ್ ಸಭೆಯ ಎದುರು ವರದಿಯನ್ನು ತೆರೆದಿದ್ದು, ವರದಿಯಲ್ಲಿ ಪ್ರೊ. ಅರಬಿ ತಪ್ಪಿತಸ್ಥ ಎಂದು ತಿಳಿದು ಬಂದಿದ್ದರಿಂದ ಅವರನ್ನು ಸೇವೆಯಿಂದ ಈ ಕೂಡಲೇ ವಜಾ ಮಾಡಿದೆ. ಹಾಗೆಯೆ ವರದಿಯನ್ನು ಮುಚ್ಚಿಟ್ಟು ಪ್ರೊ. ಅರಬಿಗೆ ಸಹಕರಿಸಿದ ಪ್ರೊ. ಎ.ಎಂ. ಖಾನ್ ವಿರುದ್ಧ ದೂರು ನೀಡಲು ನಿರ್ಧರಿಸಲಾಗಿದೆ.

- Advertisement -

Latest News

error: Content is protected !!