Thursday, June 4, 2026
Homeಕರಾವಳಿಸುಳ್ಯ: ದೇವರಗುಂಡಿಯಲ್ಲಿ ಅರೆಬೆತ್ತಲೆ ಪೋಟೋಶೂಟ್ ಪ್ರಕರಣ, ದೇವಾಲಯದ ಭಕ್ತರಲ್ಲಿ ಕ್ಷಮೆಯಾಚಿಸಿದ ನಟಿ

ಸುಳ್ಯ: ದೇವರಗುಂಡಿಯಲ್ಲಿ ಅರೆಬೆತ್ತಲೆ ಪೋಟೋಶೂಟ್ ಪ್ರಕರಣ, ದೇವಾಲಯದ ಭಕ್ತರಲ್ಲಿ ಕ್ಷಮೆಯಾಚಿಸಿದ ನಟಿ

- Advertisement -
- Advertisement -

ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಪುರಾಣ ಪ್ರಸಿದ್ಧ ದೇವರಗುಂಡಿ ಫಾಲ್ಸ್ ನಲ್ಲಿ ಅರೆಬೆತ್ತಲೆ ಪೋಟೋ ಶೂಟ್ ನಡೆಸಿ ವಿವಾದಕ್ಕೆ ಮತ್ತು ದೇವಾಲಯದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದ ಬೆಂಗಳೂರಿನ ಮಾಡೆಲ್ ಗಳಿಬ್ಬರು ಇದಕ್ಕೆ ಸಂಬಂಧಪಟ್ಟಂತೆ ನಟಿಮಣಿಯರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

“ನಾನು ತೊಡಿಕಾನಕ್ಕೆ ಹೋಗಿ ಜಲಪಾತದ ಸ್ಥಳದಲ್ಲಿ ಫೋಟೋಶೂಟ್ ನಡೆಸಿದ್ದೆ. ಆದರೆ ಆ ಸ್ಥಳ ಧಾರ್ಮಿಕ ಸ್ಥಳ ಎಂದು ನಮಗಾರಿಗೂ ತಿಳಿದಿರಲಿಲ್ಲ. ನಾನು ಆ ಫೋಟೋಗಳನ್ನು ಇನ್ ಸ್ಟಾಗ್ರಾಂ ಗೆ ಅಪ್ಲೋಡ್ ಮಾಡಿದ್ದೆ. ಬಳಿಕ ವಿವಾದಕ್ಕೆ ಕಾರಣವಾಯ್ತೆಂದು ಡಿಲೀಟ್ ಮಾಡಿದ್ದೇವೆ. ನಾನು ಅಲ್ಲಿನ ದೇವಸ್ಥಾನದವರನ್ನು ಮತ್ತು ಸ್ಥಳೀಯರನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ಬೆಂಗಳೂರಿನ ನಟಿ ಬೃಂದಾ ಅರಸ್ ದೃಶ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಈ ದೇವರಗುಂಡಿ ಫಾಲ್ಸ್ ನಲ್ಲಿ ಸ್ಥಳೀಯ ನಿವಾಸಿಗಳು ಸ್ನಾನ ಮಾಡದೇ ಸ್ಥಳದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಬಂದಿದ್ದರು. ಆದರೆ ಇದೀಗ ಬೆಂಗಳೂರಿನ ಬಿಕನಿ ಸುಂದರಿಯರು ಅರೆಬೆತ್ತಲಾಗಿ ಸುಳ್ಯ ದೇವರಗುಂಡಿ ಫಾಲ್ಸ್ ನಲ್ಲಿ ಪೋಟೋಶೂಟ್ ಮಾಡಿಸಿಕೊಂಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಡೆಲ್ ಬೃಂಧಾ ಅರಸ್ ಸೇರಿ ಇಬ್ಬರು ಮಾಡೆಲ್ ಗಳು ಈ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಈಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

https://fb.watch/1rRB1cH2r1/

- Advertisement -

Latest News

error: Content is protected !!