Saturday, October 17, 2026
Homeಕರಾವಳಿಮಂಗಳೂರಲ್ಲಿ ದುಷ್ಕರ್ಮಿಗಳಿಂದ ಇಬ್ಬರ ಮೇಲೆ ಗುಂಡಿನ ದಾಳಿ; ದಾಳಿ ನಡೆಸಿ ಪರಾರಿ

ಮಂಗಳೂರಲ್ಲಿ ದುಷ್ಕರ್ಮಿಗಳಿಂದ ಇಬ್ಬರ ಮೇಲೆ ಗುಂಡಿನ ದಾಳಿ; ದಾಳಿ ನಡೆಸಿ ಪರಾರಿ

- Advertisement -
- Advertisement -

ಮಂಗಳೂರು: ನಗರದ ಫಳ್ನೀರ್ ಬಳಿ ಯುವಕರಿಂದ ಗುಂಡಿನ ದಾಳಿ ನಡೆದಿದೆ. ಫಳ್ನೀರ್ ಬಳಿಯ ಎಂ.ಎಫ್.ಸಿ ಹೊಟೇಲ್ ಮತ್ತು ಫ್ರೆಶ್ ಮಾರ್ಟ್ ಬಳಿ ದಾಳಿ ನಡೆದಿದೆ.

ಎಂ.ಎಫ್.ಸಿ ಹೋಟೆಲ್ ಗೆ ಸಮೋಸ ಕೇಳೋದಕ್ಕೆ ಅಂತಾ ನಾಲ್ಕು ಜನ‌ ಯುವಕರ ತಂಡ ಆಗಮಿಸಿದೆ. ಈ ವೇಳೆ‌ ಹೋಟೆಲ್ ಸಿಬ್ಬಂದಿ ಜೊತೆ ಜಗಳವಾಗಿದೆ. ಆಗ ಹೊಟೇಲ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದೆ ಅಪರಿಚಿತರ ತಂಡ.

ಆರೋಪಿಗಳ ಸಿಸಿ ಟಿವಿ ದೃಶ್ಯಾವಳಿ

ಇಷ್ಟೇ ಅಲ್ಲದೇ, ಹೊಟೇಲ್ ನ ಗಾಜು, ಪೀಠೋಪಕರಣ ಧ್ವಂಸಗೈದು ಪರಾರಿ ಯತ್ನಿಸಿದ್ದಾರೆ. ಈ ವೇಳೆ ಹಿಡಿಯಲು ಯತ್ನಿಸಿದ ಹೊಟೇಲ್ ಸಿಬ್ಬಂದಿ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಗುಂಡು ತಗುಲಿ ಹೊಟೇಲ್ನ ಓರ್ವ ಸಿಬ್ಬಂದಿಗೆ ಗಾಯವಾಗಿದೆ.

ಇನ್ನು ಗುಂಡು ಹಾರಿಸಿ ಪರಾರಿಯಾಗಲೆತ್ನಿಸಿದ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ. ಇನ್ನಿಬ್ಬರು ಆಟೋ ರಿಕ್ಷಾ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಹಳೇ ದ್ವೇಷದ ಹಿನ್ನೆಲೆ ಉದ್ದೇಶ ಪೂರ್ವಕವಾಗಿ ದಾಳಿ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಹೊಟೇಲ್ ಸಿಬ್ಬಂದಿ

ಇನ್ನು ಗುಂಡಿನ ದಾಳಿ ನಡೆಸಿದವರು ಉಳ್ಳಾಲದ ದುಷ್ಕರ್ಮಿಗಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಕದ್ರಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!