Saturday, April 27, 2024
Homeಕ್ರೀಡೆಮತ್ತೊಂದು ಯಡವಟ್ಟು ಮಾಡಿಕೊಂಡ ರವಿಶಾಸ್ತ್ರಿ: ವೃದ್ಧಿಮಾನ್ ಸಾಹರನ್ನು ಹೊಗಳಿ ಧೋನಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಕೋಚ್

ಮತ್ತೊಂದು ಯಡವಟ್ಟು ಮಾಡಿಕೊಂಡ ರವಿಶಾಸ್ತ್ರಿ: ವೃದ್ಧಿಮಾನ್ ಸಾಹರನ್ನು ಹೊಗಳಿ ಧೋನಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಕೋಚ್

spot_img
- Advertisement -
- Advertisement -

ಧೋನಿಯಂತಹ ಅನುಭವಿ ವಿಕೇಟ್​ ಕೀಪರ್​​ ಬದಲಿಗೆ ಬೇರೊಬ್ಬ ವಿಕೇಟ್​​ ಕೀಪರ್​ನನ್ನು ಕೊಂಡಾಡಿದ ರವಿ ಶಾಸ್ತ್ರಿ ಸದ್ಯ ಕ್ಯಾಪ್ಟನ್ ಕೂಲ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರವಿ ಶಾಸ್ತ್ರಿ ವಿಶ್ವ ಕ್ರಿಕೆಟ್​​ ಕಂಡ ಅತ್ಯುತ್ತಮ ವಿಕೇಟ್​​ ಕೀಪರ್​​ ವೃದ್ಧಿಮಾನ್​ ಸಾಹ ಎನ್ನುವ ಮೂಲಕ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು.. ಸನ್​ ರೈಸರ್ಸ್ ಹೈದ್ರಾಬಾದ್​ ತಂಡದ ವಿಕೆಟ್​ ಕೀಪರ್ ವೃದ್ದಿಮಾನ್​ ಸಾಹರನ್ನು ಹೊಗಳಿ ಮಾಡಿದ್ದ ಒಂದೇ ಒಂದು ಟ್ವೀಟ್​ ಧೋನಿ ಅಭಿಮಾನಿಗಳನ್ನು ಕೆರಳಿಸಿದೆ.

ಇತ್ತೀಚೆಗೆ ನಡೆದ ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಹೈದ್ರಾಬಾದ್ ತಂಡದ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ವೃದ್ಧಿಮಾನ್ ಸಾಹ, ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ​​ 87 ರನ್ ಸಿಡಿಸಿದ್ರು. ಸಾಹಾರ ಅಬ್ಬರದಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಟ್ವೀಟ್​​ ಮಾಡಿದ್ದ ರವಿ ಶಾಸ್ತ್ರಿ, ಬ್ಯಾಟಿಂಗ್​ ಬಗ್ಗೆ ಪ್ರಶಂಸೋದು ಬಿಟ್ಟು, ನೀನೇ ವಿಶ್ವಕ್ರಿಕೆಟ್​​ನ ಬೆಸ್ಟ್​ ಕೀಪರ್ ಎಂದು ಹೇಳಿ, ಪೇಚಿಗೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ರವಿ ಶಾಸ್ತ್ರಿ ಅವರ ಮೇಲೆ ಧೋನಿ ಅಭಿಮಾನಿಗಳು ಗರಂ ಆಗಿದ್ದಾರೆ.

- Advertisement -
spot_img

Latest News

error: Content is protected !!