Thursday, June 4, 2026
Homeಕರಾವಳಿಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ತೋಟದಲ್ಲೇ ಬಾಕಿಯಾದ ಆನೆಮರಿ : ಆನೆ ನೋಡಲು ತೋಟದತ್ತ ಜನರ ದೌಡು..

ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ತೋಟದಲ್ಲೇ ಬಾಕಿಯಾದ ಆನೆಮರಿ : ಆನೆ ನೋಡಲು ತೋಟದತ್ತ ಜನರ ದೌಡು..

- Advertisement -
- Advertisement -

ಬೆಳ್ತಂಗಡಿ : ಕಡಿರುದ್ಯಾವರ ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಆನೆಮರಿ ಹಿಂದೆ ಹೋಗಲಾಗದೆ ತೋಟದಲ್ಲಿ ಉಳಿದ ಘಟನೆ ನಿನ್ನೆ ರಾತ್ರಿ ಕಡಿರುದ್ಯಾವರದಲ್ಲಿ ನಡೆದಿದೆ.

 ಕಡಿರುದ್ಯಾವರ ಗ್ರಾಮದ  ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಸಂಪೂರ್ಣವಾಗಿ ತೋಟವನ್ನು ಧ್ವಂಸ ಮಾಡಿವೆ.  ಆದರೆ ತೋಟದಿಂದ ಕಾಡಿಗೆ ಹೋಗುವ ವೇಳೆ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಬಾಕಿಯಾಗಿದೆ.

ಬೆಳಗ್ಗೆ ತೋಟದ ಮಾಲೀಕ ಡೀಕಯ್ಯ ಗೌಡ ಅವರು ತೋಟಕ್ಕೆ ಹೋದಾಗ ವಿಷಯ ಗೊತ್ತಾಗಿದ್ದು,ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.  ಇನ್ನು ಸುದ್ದಿ ತಿಳಿದು ಜನ ಆನೆ ಮರಿಯನ್ನು  ನೋಡಲು ಧಾವಿಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿ  ಧಾವಿಸಿದ್ದಾರೆ

- Advertisement -

Latest News

error: Content is protected !!