Monday, June 8, 2026
Homeತಾಜಾ ಸುದ್ದಿಬಾಲ್ಯ ವಿವಾಹಕ್ಕೆ ಯತ್ನ ಪ್ರಕರಣ- ವರ, ಪುರೋಹಿತ ಸೇರಿ ಸಹಕರಿಸಿದವರೆಲ್ಲರೂ ಅಂದರ್

ಬಾಲ್ಯ ವಿವಾಹಕ್ಕೆ ಯತ್ನ ಪ್ರಕರಣ- ವರ, ಪುರೋಹಿತ ಸೇರಿ ಸಹಕರಿಸಿದವರೆಲ್ಲರೂ ಅಂದರ್

- Advertisement -
- Advertisement -

ಬಳ್ಳಾರಿ:ಇಲ್ಲಿನ ಮಿಲ್ಲರ್ ಪೇಟೆಯ ಗುಡ್ಡ ಕೆಳಗಿನ ಯಲ್ಲಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನದಲ್ಲಿ ಬಾಲ್ಯ ವಿಹಾಹವನ್ನು ಪೊಲೀಸರು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಕಾರ್ಯಾಚರಣೆ ನಡೆಸಿ ಬಾಲ್ಯ ವಿವಾಹವಾಗುತ್ತಿದ್ದ ನೊಂದ ಬಾಲಕಿಯ ರಕ್ಷಣೆ ಮಾಡಿದ್ದಾರೆ. ಬಾಲ್ಯ ವಿವಾಹಕ್ಕೆ ಯತ್ನಿಸಿದ ವರ, ಪುರೋಹಿತ ಸೇರಿ ಸಹಕರಿಸಿದವರೆಲ್ಲರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯನ್ನು ಮದುವೆ ಮಾಡಿಕೊಳ್ಳುತ್ತಿದ್ದ ಸುರೇಂದ್ರ, ಬಾಲಕಿ ತಾಯಿ, ತಂದೆ, ಅಣ್ಣ, ಅಕ್ಕ ಹಾಗೂ ಚಿಕ್ಕಮ್ಮ ಮದುವೆಗೆ ಸಹಕರಿಸಿದ ಪುರೋಹಿತ ಶೇಷಗಿರಿಸ್ವಾಮಿ, ಮದುವೆಯ ಲಗ್ನಪತ್ರಿಕೆ ಮುದ್ರಿಸಿದ ಮುದ್ರಕರು ಹಾಗೂ ಮದುವೆ ಕಾರ್ಯಕ್ರಮಕ್ಕೆ ಶಾಮಿಯಾನಾ ಪೂರೈಸಿದ ಗೌಸ್ ಸೇರಿದಂತೆ ಈ ಬಾಲ್ಯ ವಿವಾಹಕ್ಕೆ ಸಹಕರಿಸಿದವರೆಲ್ಲರ ಮೇಲೆ ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!