- Advertisement -
![]()
- Advertisement -
ಮಂಗಳೂರು ಧರ್ಮಪ್ರಾಂತದ ಕೆಥೊಲಿಕ್ ಸಭಾದ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ಫಾ. ಐವನ್ ಮೈಕಲ್ ರೊಡ್ರಿಗಸ್ ಅವರನ್ನು ಬಿಷಪ್ ರೆ.ಫಾ.ಪೀಟರ್ ಪಾಲ್ ಸಲ್ಡಾನ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸದ್ಯ ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ ಸೇವೆ ಸಲ್ಲಿಸುತ್ತಿರುವ ಫಾ. ರೊಡ್ರಿಗಸ್ ಅವರು ಜೂನ್ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಈ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಇತ್ತೀಚೆಗಷ್ಟೇ ಬಿಜೈಯಿಂದ ಪುತ್ತೂರಿಗೆ ವರ್ಗಾವಣೆಗೊಂಡಿರುವ ನಿರ್ಗಮಿತ ನಿರ್ದೇಶಕ ಫಾ. ಜೆ.ಬಿ. ಸಲ್ಡಾನ ಅವರ ಸ್ಥಾನಕ್ಕೆ ಇವರು ನಿಯೋಜನೆಗೊಂಡಿದ್ದಾರೆ.
- Advertisement -


