Thursday, June 4, 2026
Homeತಾಜಾ ಸುದ್ದಿಡೋಪಿಂಗ್ ಟೆಸ್ಟ್ ಗೆ ಮೂತ್ರದ ಬದಲು ನೀರು ತುಂಬಿಸಿ ಕೊಟ್ಟ ರಾಗಿಣಿ !

ಡೋಪಿಂಗ್ ಟೆಸ್ಟ್ ಗೆ ಮೂತ್ರದ ಬದಲು ನೀರು ತುಂಬಿಸಿ ಕೊಟ್ಟ ರಾಗಿಣಿ !

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿನ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಟಿ ರಾಗಿಣಿ ಮತ್ತು ನಟಿ ಸಂಜನಾರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಇಂದು ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ಡೋಪಿಂಗ್ ಟೆಸ್ಟ್ ಗಾಗಿ ಕರೆತರಲಾಗಿದೆ.

ನಟಿ ರಾಗಿಣಿಯನ್ನು ಎರಡರೆಡು ಬಾರಿ ಡೋಪಿಂಗ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಡೋಪಿಂಗ್ ಟೆಸ್ಚ್ ಸಲುವಾಗಿ ಕೂದಲು, ಉಗುರು, ರಕ್ತದ ಮಾದರಿ ಹಾಗೂ ಮಾತ್ರವನ್ನು ಪಡೆಯಲಾಗುತ್ತದೆ. ಆದರೆ ರಾಗಿಣಿ ಮೂತ್ರಕ್ಕೆ ನೀರು ತುಂಬಿಸಿಕೊಟ್ಟಿದ್ದಾರಂತೆ.

ಒಂದು ವೇಳೆ ಮೂತ್ರದಲ್ಲಿ ಡ್ರಗ್ಸ್ ಅಂಶಗಳಿದ್ರೆ ಅದು ಕಾಣಿಸದಿರಲಿ ಎಂದು ಹೀಗೆ ಮಾಡಿರುವ ಸಾಧ್ಯತೆಗಳಿದೆ ಎನ್ನಲಾಗಿದೆ. ರಾಗಿಣಿಯ ಖತರ್ ನಾಕ್ ಆಟವನ್ನು ಪತ್ತೆ ಹಚ್ಚಿದ ಲ್ಯಾಬ್ ಸಿಬ್ಬಂದಿ, ನೀರು ತುಂಬಿಸಿ ಮೂತ್ರ ಕೊಡಬೇಕಾಗಿಲ್ಲ, ಮತ್ತೊಮ್ಮೆ ಕೊಡಿ ಅಂದಿದ್ದಾರೆ. ಹೀಗಾಗಿ ಎರಡನೇ ಬಾರಿಗೆ ರಾಗಿಣಿ ಮೂತ್ರವನ್ನು ಡೋಪಿಂಗ್ ಪರೀಕ್ಷೆಗಾಗಿ ಕೊಟ್ಟಿದ್ದಾರಂತೆ.

- Advertisement -

Latest News

error: Content is protected !!