Saturday, June 6, 2026
Homeತಾಜಾ ಸುದ್ದಿಮುಂಬೈ: ಕೋವಿಡ್-19 ಅಂಬುಲೆನ್ಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದ 6 ಮಂದಿಯ ಬಂಧನ

ಮುಂಬೈ: ಕೋವಿಡ್-19 ಅಂಬುಲೆನ್ಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದ 6 ಮಂದಿಯ ಬಂಧನ

- Advertisement -
- Advertisement -

ಮುಂಬೈ: ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿಯೇ ನಿಯಮ ಉಲ್ಲಂಘಿಸಿ ಆಸ್ಪತ್ರೆಯ ಆವರಣದಲ್ಲಿ ಕೋವಿಡ್‌-19 ಸೌಲಭ್ಯಕ್ಕೆಂದು ಮೀಸಲಾದ ಅಂಬುಲೆನ್ಸ್‌ನೊಳಗೆ ಮದ್ಯಪಾನಗೈದು ಪಾರ್ಟಿ ಮಾಡುತ್ತಿದ್ದ ಕಾರ್ಮಿಕರ ಗುಂಪೊಂದನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಪ್ರಕರಣ ಮುಂಬೈಯ ಮೀರಾ-ಭಾಯಂದರ್ ನಲ್ಲಿ ನಡೆದಿದೆ.

ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯ ಭಾಯಂದರ್‌ ಪಶ್ಚಿಮದ ತೆಂಬಾದಲ್ಲಿರುವ ಪಂಡಿತ್‌ ಭೀಮ್ ಸೇನ್ ಜೋಶಿ ಆಸ್ಪತ್ರೆಯ ಕಾಂಪೌಂಡ್‌ ನಲ್ಲಿ ಆಂಬುಲೆನ್ಸ್‌ ಚಾಲಕ ಮತ್ತು ಆವರಣದ ನೈರ್ಮಲ್ಯ ಮತ್ತು ಸೋಂಕು ನಿವಾರಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು ಆರು ಕಾರ್ಮಿಕರ ತಂಡವೊಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮದ್ಯಪಾನ ಮಾಡುತ್ತಿತ್ತು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಾಯಂದರ್‌ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಆಂಬುಲೆನ್ಸ್‌ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ದ ಪೊಲೀಸರು ಸುಮೋಟು ಪ್ರಕರಣ ದಾಖಲಿಸಿದ್ದು, ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ.

- Advertisement -

Latest News

error: Content is protected !!