Thursday, June 4, 2026
Homeಕರಾವಳಿಮೂಡುಬಿದಿರೆ ತಹಶಿಲ್ದಾರ್ ಅನಿತಾಲಕ್ಷ್ಮೀ ವರ್ಗಾವಣೆ

ಮೂಡುಬಿದಿರೆ ತಹಶಿಲ್ದಾರ್ ಅನಿತಾಲಕ್ಷ್ಮೀ ವರ್ಗಾವಣೆ

- Advertisement -
- Advertisement -

ಮೂಡುಬಿದಿರೆ: ಇಲ್ಲಿ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿತಾಲಕ್ಷ್ಮೀ ಇಂದು ಮೂಡುಬಿದಿರೆಯಿಂದ ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ಕಳೆದ 14 ತಿಂಗಳುಗಳಿಂದ ಮೂಡುಬಿದಿರೆಯಲ್ಲಿ ತಹಶಿಲ್ದಾರ್ ಆಗಿದ್ದ ಅನಿತಾಲಕ್ಷ್ಮೀ ಚುನಾವಣೆ ವಿಭಾಗದ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ತಹಶೀಲ್ದಾರ್
ಅಕ್ರಮವಾಗಿ ನಡೆಯುತ್ತಿದ್ದ ಮರಳು ಮಾಫಿಯಾ ಮತ್ತು ಕೆಂಪು ಕಲ್ಲಿನ ಕೋರೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತಿದ್ದ ಅನಿತಾಲಕ್ಷ್ಮೀ ರಾಜಕರಣಿಗಳ ಕೆಂಗಣ್ಣಿಗೆ ಗುರಿಯಾಗಿ ಈ ಹಿಂದೆ ಎರಡು ಬಾರಿ ವರ್ಗಾವಣೆಗೆ ಪ್ರಯತ್ನಗಳಾಗಿತ್ತು. ಆದರೆ ಕೋರ್ಟ್ ತಡೆ ನೀಡಿದ್ದರಿಂದ ವರ್ಗಾವಣೆ ಸ್ಥಗಿತಗೊಂಡಿತ್ತು.

ಬಡವರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮೂಡುಬಿದಿರೆ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ್ದರು. ಆದರೆ ಮತ್ತೆ ವರ್ಗಾವಣೆಯ ಪ್ರಯತ್ನ ಮುಂದುವರೆದಿದ್ದರಿಂದ ಇದೀಗ ವರ್ಗಾವಣೆಗೊಂಡಿದ್ದಾರೆ.

ಈ ಹಿಂದೆಯೂ ಮೂಡುಬಿದಿರೆಯಲ್ಲಿ ಪ್ರಭಾರ ತಹಶಿಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ಗುರುಪ್ರಸಾದ್ ಮತ್ತೆ ತಾಲೂಕು ಪ್ರಭಾರ ತಹಶೀಲ್ದಾರ್ ಅಗಿ ನೇಮಕಗೊಂಡಿದ್ದಾರೆ.

- Advertisement -

Latest News

error: Content is protected !!