Sunday, May 5, 2024
Homeಕರಾವಳಿ₹10 ಕೋಟಿ ವೆಚ್ಚದ ಮೂಡುಬಿದಿರೆ ಮಿನಿ ವಿಧಾನಸೌಧ ಕಾಮಗಾರಿ ಪ್ರಾರಂಭ

₹10 ಕೋಟಿ ವೆಚ್ಚದ ಮೂಡುಬಿದಿರೆ ಮಿನಿ ವಿಧಾನಸೌಧ ಕಾಮಗಾರಿ ಪ್ರಾರಂಭ

spot_img
- Advertisement -
- Advertisement -

ಮೂಡುಬಿದಿರೆ: ನೂತನ ತಾಲೂಕು ಮೂಡುಬಿದಿರೆಯಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಪೂಜೆ ನೆರವೇರಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಮಾಹಿತಿ ನೀಡಿ, ಮೂಡುಬಿದಿರೆ ತಾಲೂಕಿನಲ್ಲಿ ವರ್ಷದೊಳಗೆ ಮಿನಿವಿಧಾನಸೌಧವು ನಿರ್ಮಾಣಗೊಳ್ಳಲಿದೆ. ಕಟ್ಟಡದ ಗುಣಮಟ್ಟಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೂಡುಬಿದಿರೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ಸಾಲ್ಯಾನ್, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಸದಸ್ಯರಾದ ಲಕ್ಷ್ಮಣ್ ಪೂಜಾರಿ, ಗೋಪಾಲ ಶೆಟ್ಟಿ, ಮಂಜುನಾಥ ರೈ, ಮಂಗಳೂರು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಪುರಸಭೆ ಸದಸ್ಯರಾದ ರಾಜೇಶ್ ನಾಯ್ಕ್, ಪ್ರಸಾದ್ ಕುಮಾರ್, ಶ್ವೇತಾ ಕುಮಾರಿ, ಧನಲಕ್ಷ್ಮೀ, ಕುಶಲಾ, ಪುರಸಭೆ ಮುಖ್ಯಾಧಿಕಾರಿ ಇಂದು.ಎಂ, ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಮುಖಂಡರಾದ ಕೆ.ಆರ್ ಪಂಡಿತ್, ಬಾಹುಬಲಿ ಪ್ರಸಾದ್ , ಕೆ.ಪಿ ಜಗದೀಶ್ ಅಧಿಕಾರಿ, ರಾಜೇಶ್ ಮಲ್ಯ, ಅಜಯ್ ರೈ, ಶಶಿಧರ್ , ಗುತ್ತಿಗೆದಾರ, ಬಿಮಲ್ ಇನ್ಫ್ರಾ ಕನ್‍ಸ್ಟ್ರಕ್ಷನ್ ಪ್ರವರ್ತಕ ಪ್ರವೀಣ್, ಹೌಸಿಂಗ್ ಬೋರ್ಡ್ ಇಂಜಿನಿಯರಿಂಗ್ ಪ್ರದೀಪ್, ಸಹಾಯಕ ಕಾರ್ಯನಿರ್ವಹಣಾ ವಿನಯ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!