Wednesday, June 24, 2026
Homeಕರಾವಳಿರೆಖ್ಯ: 70 ಲಕ್ಷ ಮೊತ್ತದ ಕಾಮಗಾರಿಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

ರೆಖ್ಯ: 70 ಲಕ್ಷ ಮೊತ್ತದ ಕಾಮಗಾರಿಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

- Advertisement -
- Advertisement -

ರೆಖ್ಯ: 70 ಲಕ್ಷ ರೂಪಾಯಿ ಅನುದಾನದಲ್ಲಿ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.

70 ಲಕ್ಷ ರೂನಲ್ಲಿ ನೇಲಡ್ಕದಿಂದ – ನಾಳಾಲು ರಸ್ತೆ ಕಾಂಕ್ರೀಟಿಕರಣಕ್ಕೆ 10 ಲಕ್ಷ, ಎಂಜಿರದಿಂದ – ಕೋಟಿಯಾರ್ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಪರಕ್ಕಲದಿಂದ – ಕೊಳೆಚಾವು ರಸ್ತೆ ಕಾಂಕ್ರೀಟಿಕರಣ – 25 ಲಕ್ಷ ರೂ ಹಾಗೂ ನೇಲಡ್ಕದಿಂದ – ಕೋಲಾರ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ ರೂ ಅನುದಾನವನ್ನು ಶಾಸಕ ಹರೀಶ್ ಪೂಂಜ ಬಿಡುಗಡೆ ಮಾಡಿ ಇಂದು ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ್, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ರಾಘವೇಂದ್ರ ನಾಯಕ್, ಗುದ್ರಾದಿ ಗುಡ್ರಮಲ್ಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ಭಾ.ಜ.ಪಾ ರೆಖ್ಯ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ ಕೆ ರೆಖ್ಯ, ಊರಿನ ಪ್ರಮುಖರಾದ ಸದಾಶಿವ ಟಿಕೆ, ಪ್ರಮೋದ್ ಕುಮಾರ್ ರೈ ಎಂತಿಮಾರು, ಯು.ಆರ್ ನಾರಾಯಣ ಗೌಡ, ಶೀನಪ್ಪ ಗೌಡ ಪರತ್ತಿಲ್, ಬೇಬಿ ಕಿರಣ್ ಎಂಜಿರ, ಶ್ಯಾಮ್ ಭಟ್ ಪರಕ್ಕಲ, ಸುಂದರ ಗೌಡ ಕೊಲೆಚ್ಚವು, ದಾಮೋದರ ಗೌಡ ಕೊಲೆಚ್ಚವು, ನಾಗೇಶ ಜಾಗೆದಕಂಡ, ಗಣೇಶ ಕೀಜನ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!