Thursday, June 4, 2026
Homeತಾಜಾ ಸುದ್ದಿವಿಚಾರಣೆ ವೇಳೆ ಬೆನ್ನುನೋವು, ಜ್ವರ ಎಂದು ನೆಪ ಹೇಳಿದ ರಾಗಿಣಿ, ಸಾಂತ್ವನ ಕೇಂದ್ರದಲ್ಲಿ "ಮಾದಕ" ನಟಿಯ...

ವಿಚಾರಣೆ ವೇಳೆ ಬೆನ್ನುನೋವು, ಜ್ವರ ಎಂದು ನೆಪ ಹೇಳಿದ ರಾಗಿಣಿ, ಸಾಂತ್ವನ ಕೇಂದ್ರದಲ್ಲಿ “ಮಾದಕ” ನಟಿಯ ಮೆಡಿಕಲ್ ಚೆಕಪ್…

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿಯಿಂದ ಬಂಧಿತರಾಗಿರುವ ನಟಿ ರಾಗಿಣಿ ಬೆಳಗಿನ ಉಪಹಾರ ಮುಗಿಸಿ ಮೆಡಿಕಲ್ ಚೆಕಪ್ ಮಾಡಿಸಿಕೊಂಡಿದ್ದಾರೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಸಾಂತ್ವನ ಕೇಂದ್ರದ ಕೆಳ ಮಹಡಿಯಲ್ಲಿ ಚೆಕಪ್‌ ಮಾಡಿಸಿದ್ದು, ಅವರ ಆರೋಗ್ಯ ನಾರ್ಮಲ್ ಆಗಿದೆ ಎಂದು ತಿಳಿದುಬಂದಿದೆ.

ಮೆಡಿಕಲ್ ಚಕಪ್ ಬಳಿಕ ರಾಗಿಣಿ ರೂಮ್ ನಲ್ಲಿ ಪುಸ್ತಕ ಓದುತ್ತಾ, ವಾಕ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ನಿನ್ನೆ ಜ್ವರ ಹಾಗೂ ಬೆನ್ನು ನೋವು ಸಮಸ್ಯೆಯಿದೆ ಎಂದು ರಾಗಿಣಿ ಸಿಸಿಬಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನಲೆಯಲ್ಲಿ ರಾಗಿಣಿ ಅವರನ್ನು ಇಂದು ಮೆಡಿಕಲ್ ಚೆಕಪ್ ಗೆ ಒಳಪಡಿಸಲಾಗಿದೆ. ಇನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಹತ್ತಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

- Advertisement -

Latest News

error: Content is protected !!