Monday, October 12, 2026
Homeತಾಜಾ ಸುದ್ದಿಕೊರೊನಾ ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರಗೈದ ಆಂಬ್ಯುಲೆನ್ಸ್ ಚಾಲಕ

ಕೊರೊನಾ ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರಗೈದ ಆಂಬ್ಯುಲೆನ್ಸ್ ಚಾಲಕ

- Advertisement -
- Advertisement -

ತಿರುವನಂತಪುರ: 19 ವರ್ಷದ ಕರೊನಾ ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ, ಆಕೆಯ ಮೇಲೆ ಅಂಬ್ಯುಲೆನ್ಸ್‌ ಚಾಲಕನೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ!

ಕೇರಳದ ಪಥನಮತ್ತಟ್ಟದ ಅರಣ್ಮುಲಾದಲ್ಲಿ ಈ ಘಟನೆ ನಿನ್ನೆ ರಾತ್ರಿ ನಡೆದಿದೆ. 108 ಅಂಬ್ಯುಲೆನ್ಸ್‌ನಲ್ಲಿ ಯುವತಿಯನ್ನು ಕರೆದೊಯ್ಯುವಾಗ 28 ವರ್ಷ ನೌಫಲ್‌ ಎಂಬಾತ ಈ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ.

ಈತ ಇಬ್ಬರು ಯುವತಿಯನ್ನು ಅಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಬರುತ್ತಿದ್ದ. ಒಬ್ಬಳನ್ನು ಒಂದು ಆಸ್ಪತ್ರೆಯ ಸಮೀಪ ಡ್ರಾಪ್‌ ಮಾಡಿದ್ದ. ಆದರೆ 19 ವರ್ಷದ ಯುವತಿಗೆ ಕರೊನಾ ಸೋಂಕು ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡುವಂತೆ ಹೇಳಲಾಯಿತು.

ಆಕೆಯನ್ನು ಕರೆದುಕೊಂಡು ಹೋಗುವಾಗ ನೌಫಲ್‌, ಆಂಬುಲೆನ್ಸ್ ಅನ್ನು ನಿರ್ಜನ ಸ್ಥಳಕ್ಕೆ ಓಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ‍ಪಾಂಡಲಂ ಆಸ್ಪತ್ರೆಯಲ್ಲಿ ಇಳಿಸಿ ಹೋಗಿದ್ದಾನೆ.

ವಿಷಯ ತಿಳಿಯುತ್ತಲೇ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಗೆ ಹಲವಾರು ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾಯಂಕುಲಂ ಮೂಲದ ನೌಫಲ್ ವಿರುದ್ಧ ಕೇಸು ದಾಖಲಾಗಿದ್ದು, ಈತ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಘಟನೆಯ ಕುರಿತು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಚಾಲಕನನ್ನು ಏಜೆನ್ಸಿಯೊಂದು ಹೈಯರ್‌ ಮಾಡಿದೆ. ಆತನ ಪೂರ್ವಪರಗಳನ್ನು ತಿಳಿದುಕೊಳ್ಳದೇ ನೇಮಕ ಮಾಡಿಕೊಳ್ಳಲಾಗಿದೆಯೇ ಎಂಬ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈ ರೀತಿ ಹಿಂದೆಂದೂ ಆಗಿರಲಿಲ್ಲ. ಮುಂದೆ ಎಚ್ಚರಿಕೆ ವಹಿಸಲಾಗುವುದು ಎಂದಿದ್ದಾರೆ.

- Advertisement -

Latest News

error: Content is protected !!