Friday, August 28, 2026
Homeಕರಾವಳಿಬೆಳಾಲು: ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿ ಎಂದು ವಸಂತ ಬಂಗೇರರಿಂದ ಆರೋಪ, ಸ್ಥಳಕ್ಕೆ ಭೇಟಿ ನೀಡಿ...

ಬೆಳಾಲು: ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿ ಎಂದು ವಸಂತ ಬಂಗೇರರಿಂದ ಆರೋಪ, ಸ್ಥಳಕ್ಕೆ ಭೇಟಿ ನೀಡಿ ಮರು ಕಾಮಗಾರಿಗೆ ಆಗ್ರಹ

- Advertisement -
- Advertisement -

ಬೆಳ್ತಂಗಡಿ: ಬೆಳಾಲು ಗ್ರಾಮದ ಓಣಿಯಾಲ್ ಕೆರೆ ನಿಂತಿಕಲ್ಲು ರಸ್ತೆಗೆ ಕೆ.ಆರ್ ಐ ಡಿ ಎಲ್ ಮೂಲಕ 1 ಕಿ ಮೀ ಉದ್ದದ ರಸ್ತೆಗೆ ರೂ 50 ಲಕ್ಷದ ಕಾಮಗಾರಿ ಕಳೆದ ಕೆಲ ತಿಂಗಳ ಹಿಂದೆ ನಡೆದಿತ್ತು. ಕಾಮಗಾರಿ ಪೂರ್ಣಗೊಳಿಸಿ ಕಳೆದ 10 ದಿನಗಳ ಹಿಂದೆ ಸಂಚಾರ ಮುಕ್ತಗೊಳಿಸಲಾಗಿತ್ತು. ಈಗಾಗಲೇ ಈ ಕಾಮಗಾರಿ ಕಳಪೆ ಎಂದು ವಾಹನ ಸಂಚಾರದ ವೇಳೆ ಅಲ್ಲಲ್ಲಿ ಬಿರುಕು ಕಂಡಿದ್ದು ಇದು ಗುತ್ತಿಗೆದಾರರ ನಿರ್ಲಕ್ಷ ಮತ್ತು ಮಧ್ಯವರ್ತಿಗಳ ಕಮಿಶನ್‌ನಿಂದಾಗಿ ಕಾಮಗಾರಿ ಕಳಪೆ ಮಟ್ಟದಾಗಿದೆ ಎಂದು ಇದನ್ನು ಇಂಜೀನೀಯರ್ ಪರಿಶೀಲಿಸಿ ಎಲ್ಲಾ ಕಾಮಗಾರಿಗಳನ್ನು ಮರು ಮಾಡಿಸಿಕೊಡಬೇಕೆಂದು ಮಾಜಿ ಶಾಸಕ ಕೆ ವಸಂತ ಬಂಗೇರ ಎಚ್ಚರಿದ್ದಾರೆ.

ಸ್ಥಳಕ್ಕೆ ವಸಂತ ಬಂಗೇರ ಮತ್ತು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬೇಟಿ ನೀಡಿದ ಸಂಧರ್ಭದಲ್ಲಿ ಮರು ಕಾಮಗಾರಿಗೆ ಆಗ್ರಹಿಸಿದರು.

ಕಾಮಗಾರಿ ಕಳಪೆ ಇದೆ ಎಂದು ತಿಳಿದ ತಕ್ಷಣ ಕೆ.ಆರ್ ಐ ಡಿ ಎಲ್ ಮಂಗಳೂರು ಇದರ ಇಂಜಿನೀಯರ್ರವರಿಗೆ ದೂರವಾಣಿ ಮೂಲಕ ಬರ ತಿಳಿಸಿದ್ದರು ಅವರು ಬರಲಿಲ್ಲ. ಹಾಗೆಯೇ ನಾನು ಬರುತ್ತೇನೆ ಎಂದು ತಿಳಿದ ಕೂಡಲೆ ರಾತ್ರಿಯೇ ಕಳಪೆಯಾದ ಕಾಮಗಾರಿಯನ್ನು ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಈ ಸಂಧರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ ಗೌಡ, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ತಾ.ಪಂ ಮಾಜಿ ಅಧ್ಯಕ್ಷ ಜತ್ತಣ್ಣ ಗೌಡ, ಹಾಲಿ ಸದಸ್ಯ ಪ್ರವೀಣ್, ಬೆಳಾಲು ಗ್ರಾ.ಪಂ ಮಾಜಿ ಅಧ್ಯಕ್ಷ ದಿನೇಶ್ ಕೋಟ್ಯಾನ್, ಬೆಳ್ತಂಗಡಿ ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಕಾಂಗ್ರೇಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅನಿಲ್ ಪೈ, ಬೆಳಾಲು ಸಹಕಾರಿ ಸಂಘದ ನಿರ್ದೇಶಕರಾದ ಸುಲೈಮಾನ್ ಭೀಮಂಡೆ, ವಿಜಯ ಗೌಡ ಸೌತೆಗದ್ದೆ, ಮಾಣಿಗ, ಬೆಳಾಲು ಗ್ರಾ.ಪಂ ಮಾಜಿ ಸದಸ್ಯರುಗಳಾದ ಜಯಂತ ಗೌಡ ಓಣ್ಯಾಲು, ದಯಾನಂದ ಪಿ, ಪ್ರೇಮಾ, ಮಾಜಿ ಅಧ್ಯಕ್ಷರು ಮೋಹನ ಗೌಡ, ಹಾಲು ಉತ್ಪಾದಕ ಸಂಘದ ನಿರ್ದೇಶಕ, ಪ್ರಮುಖರಾದ ಯಶೋಧರ ಮೈರಾಜೆ, ಗೋವಿಂದ ಗೌಡ, ನಿತಿನ್ ಮೋನಿಸ್, ಪವನ್ ಕೊಲ್ಲಾಜೆ, ಚಂದ್ರಶೇಖರ, ಉಮರಬ್ಬ ವಿಶೇಷ ಗೌಡ ಓಣಿಯಾಲು, ಜೋಯ್ ನಾಯರಕಂಡ, ಮಹಮ್ಮದ್ ಬೆಳಾಲ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!