Friday, August 28, 2026
Homeಕರಾವಳಿಮಂಗಳೂರುಧರ್ಮಸ್ಥಳ - ಉಜಿರೆ ಹೆದ್ದಾರಿಯಲ್ಲಿ ಭೀಕರ ಅಪಘಾತ: ಬಸ್-ಕಾರು ಡಿಕ್ಕಿ, ಚಾಲಕನಿಗೆ ಗಂಭೀರ ಗಾಯ

ಧರ್ಮಸ್ಥಳ – ಉಜಿರೆ ಹೆದ್ದಾರಿಯಲ್ಲಿ ಭೀಕರ ಅಪಘಾತ: ಬಸ್-ಕಾರು ಡಿಕ್ಕಿ, ಚಾಲಕನಿಗೆ ಗಂಭೀರ ಗಾಯ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ – ಉಜಿರೆ ಹೆದ್ದಾರಿಯಲ್ಲಿ  ಮಣ್ಣ ಸಂಕದ ಸಮೀಪ ಕೆ.ಎಸ್ ಆರ್ ಟಿ ಸಿ ಬಸ್ ಹಾಗೂ ಕಾರಿನ ನಡುವೆ ಆ.28 ರಂದು ಶುಕ್ರವಾರ ಮಧ್ಯಾಹ್ನ ಭೀಕರ‌ ಅಪಘಾತ ಸಂಭವಿಸಿದ್ದು ಕಾರು ಚಾಲಕ ಧರ್ಮಸ್ಥಳದ ನಿವಾಸಿ ಅನಂತರಾಮ್(54) ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ವೇಳೆ ಕಾರಿನ ಹಿಂದಿನಿಂದ ಬರುತ್ತಿದ್ದ ಓಮ್ನಿ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಈಡಾದ ಕಾರಿನ‌ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗಾಯಾಗೊಂಡ ಅನಂತರಾಮ್ ಅವರನ್ನು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆ ಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!