Friday, August 28, 2026
Homeಪ್ರಮುಖ-ಸುದ್ದಿ‘ಟಾಕ್ಸಿಕ್’ ಸೇರಿ ಪ್ಯಾನ್ ಇಂಡಿಯಾ ಸಿನಿಮಾಗಳ ವಿರುದ್ಧ ಅಣ್ಣಾಮಲೈ ಕಿಡಿ

‘ಟಾಕ್ಸಿಕ್’ ಸೇರಿ ಪ್ಯಾನ್ ಇಂಡಿಯಾ ಸಿನಿಮಾಗಳ ವಿರುದ್ಧ ಅಣ್ಣಾಮಲೈ ಕಿಡಿ

- Advertisement -
- Advertisement -

ಚೆನ್ನೈ: ಪ್ರಸ್ತುತ ಬರುತ್ತಿರುವ ಪ್ಯಾನ್ ಇಂಡಿಯಾ ಆ್ಯಕ್ಷನ್ ಸಿನಿಮಾಗಳಲ್ಲಿ ಅತಿಯಾದ ಹಿಂಸೆ ಹಾಗೂ ಸ್ತ್ರೀವಿರೋಧಿ ವಿಷಯಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ, ‘ವಿ ದಿ ಲೀಡರ್ಸ್’ ಸಂಸ್ಥಾಪಕ ಕೆ. ಅಣ್ಣಾಮಲೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತೀಯ ಚಲನಚಿತ್ರಗಳ ಸೆನ್ಸಾರ್ ನಿಯಮಗಳು ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಅತ್ಯಂತ ಸಡಿಲವಾಗಿವೆ ಎಂದು ಟೀಕಿಸಿದರು.

ವಯೋಮಿತಿ ಆಧಾರಿತ (Adult Certificate) ಚಿತ್ರಗಳಲ್ಲೂ ಕಣ್ಣಾರೆ ನೋಡಲಾಗದಷ್ಟು ಭೀಕರ ಹಿಂಸೆ ಮತ್ತು ಮಹಿಳಾವಿರೋಧಿ ದೃಶ್ಯಗಳನ್ನು ಪದೇಪದೆ ಪ್ರದರ್ಶಿಸಲಾಗುತ್ತಿದ್ದು, ಪ್ರೇಕ್ಷಕರು ಅನಿವಾರ್ಯವಾಗಿ ಇಂತಹ ದೃಶ್ಯಗಳನ್ನು ವೀಕ್ಷಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

- Advertisement -

Latest News

error: Content is protected !!