Friday, June 5, 2026
Homeತಾಜಾ ಸುದ್ದಿಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ನಾಳೆ ನಿಶ್ಚಿತಾರ್ಥ.. ಹುಡ್ಗಿ ಯಾರು ಗೊತ್ತಾ.?

ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ನಾಳೆ ನಿಶ್ಚಿತಾರ್ಥ.. ಹುಡ್ಗಿ ಯಾರು ಗೊತ್ತಾ.?

- Advertisement -
- Advertisement -

ಬೆಂಗಳೂರು: ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಭದ್ರಾವತಿಯ ಕಾಂಗ್ರೆಸ್‌ನ ಶಾಸಕ ಸಂಗಮೇಶ್ ಶೀಘ್ರದಲ್ಲಿಯೇ ಬೀಗರಾಗಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಮಗ ಮೃನಾಲ್ ಜತೆ ಸಂಗಮೇಶ್‌ ಅವರ ಸಹೋದರ ಶಿವಕುಮಾರ್ ಅವರ ಪುತ್ರಿ ಡಾ. ಹಿತಾ ಅವರ ನಿಶ್ಚಿತಾರ್ಥ ನಡೆಯಲಿದೆ.

ಕುಟುಂಬದ ಗುರು ಹಿರಿಯರು ನಿಶ್ಚಯಿಸಿದಂತೆ ನಾಳೆ ಶಿವಮೊಗ್ದದ ಸರ್ಜಿ ಛತ್ರದಲ್ಲಿ ಡಾ.ಹಿತಾ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಗೆ ನಿಶ್ಚಿತಾರ್ಥ ನೆರವೇರಲಿದೆ. ಇಂದಿನಿಂದಲೇ ನಿಶ್ಚಿತಾರ್ಥದ ಕಾರ್ಯಗಳು ಆರಂಭವಾಗಿದ್ದು, ನಾಳೆ ಈ ಜೋಡಿಗಳು ಎಂಗೇಜ್ ಆಗಲಿದೆ. ಶೀಘ್ರದಲ್ಲೇ ಮದುವೆ ದಿನಾಂಕ ಕೂಡ ನಿಗದಿ ಆಗಲಿದೆ ಎನ್ನಲಾಗಿದೆ. ಆ ಮೂಲಕ ಭದ್ರಾ ದಂಡೆಯ ಹುಡುಗಿ ಕುಂದಾನಗರಿಯ ಪ್ರಭಾವಿ ಕುಟುಂಬದ ಸೊಸೆ ಆಗುತ್ತಿದ್ದಾರೆ.

- Advertisement -

Latest News

error: Content is protected !!