Monday, June 8, 2026
Homeತಾಜಾ ಸುದ್ದಿಜಮ್ಮುವಿನಲ್ಲಿ ಉಗ್ರರ ದಾಳಿಗೆ ಒಬ್ಬ ಪೊಲೀಸ್ ಅಧಿಕಾರಿ, ಇಬ್ಬರು ಸಿಆರ್ಪಿಎಫ್ ಜವಾನರು ಹುತಾತ್ಮ

ಜಮ್ಮುವಿನಲ್ಲಿ ಉಗ್ರರ ದಾಳಿಗೆ ಒಬ್ಬ ಪೊಲೀಸ್ ಅಧಿಕಾರಿ, ಇಬ್ಬರು ಸಿಆರ್ಪಿಎಫ್ ಜವಾನರು ಹುತಾತ್ಮ

- Advertisement -
- Advertisement -

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಿಆರ್‌ಪಿಎಫ್‌ನ ನಾಕಾ ಬಂಧಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಕೆರ್ರಿ ಪ್ರದೇಶದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ, ಇಬ್ಬರು ಸಿಆರ್ಪಿಎಫ್ ಜವಾನರು ಹುತಾತ್ಮ ರಾಗಿದ್ದಾರೆ ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಭಯೋತ್ಪಾದಕರು ಸೋಮವಾರ ಬಾರಾಮುಲ್ಲಾದ ಕೆರ್ರಿ ಪ್ರದೇಶದಲ್ಲಿ ನಾಕಾ ಬಂಧಿ ಪ್ರದೇಶದಲ್ಲಿ ಸಿಆರ್‌ಪಿಎಫ್‌ನ ಇಬ್ಬರು ಸೈನಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ಜವಾನರು ಸ್ಥಳಕ್ಕೆ ಧಾವಿಸಿದ್ದು, ಪರಾರಿಯಾಗಿರುವ ಭಯೋಯತ್ಪಾಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!