Thursday, November 5, 2026
Homeತಾಜಾ ಸುದ್ದಿಗೃಹಲಕ್ಷ್ಕೀ ಯೋಜನೆಯ ಮೂರು ಕಂತುಗಳ ಹಣ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ

ಗೃಹಲಕ್ಷ್ಕೀ ಯೋಜನೆಯ ಮೂರು ಕಂತುಗಳ ಹಣ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ

- Advertisement -
- Advertisement -

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಮೂರು ಕಂತುಗಳ ಹಣ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯೋಜನೆಯ 34, 35 ಮತ್ತು 36ನೇ ಕಂತುಗಳ ಹಣ ಒಟ್ಟಿಗೆ 7405.86 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಅಕ್ಟೋಬರ್ ತಿಂಗಳವರೆಗೆ ರಾಜ್ಯದ 1.24 ಕೋಟಿ ಫಲಾನುಭವಿ ಮಹಿಳೆಯರಿಗೆ 86,838.36 ಕೋಟಿ ರೂಪಾಯಿ ಹಣ ಪಾವತಿಯಾದಂತಾಗಿದೆ.

ಸದ್ಯ 34 ನೇ ಕಂತಿನ 2500 ಕೋಟಿ ರೂಪಾಯಿ, 35ನೇ ಕಂತಿನ 2452.93 ಕೋಟಿ ರೂಪಾಯಿ ಮತ್ತು 36ನೇ ಕಂತಿನ 2452.93 ಕೋಟಿ ರೂಪಾಯಿ ಹಣವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಲಾಗಿದೆ

36 ಕಂತುಗಳ ಮೂಲಕ ಪ್ರತಿ ಫಲಾನುಭವಿಗೆ 72,000 ರೂಪಾಯಿ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದಂತಾಗಲಿದೆ.

- Advertisement -

Latest News

error: Content is protected !!