- Advertisement -
- Advertisement -
ತಿರುವನಂತಪುರ: ಪ್ರವಾಸಿಗರ ನೆಚ್ಚಿನ ತಾಣ ಮುನ್ನಾರ್ನಲ್ಲಿ 12 ವರ್ಷಗಳಿಗೊಮ್ಮೆ ಅರಳುವ ‘ನೀಲಕುರಿಂಜಿ’ ಹೂವುಗಳು ಮತ್ತೆ ಅರಳಿ ನಿಂತಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ.
12 ವರ್ಷಗಳಿಗೊಮ್ಮೆ ಕಂಡುಬರುವ ಈ ಅಪರೂಪದ ವೈಭವವನ್ನು ಕಣ್ಣುಂಬಿಕೊಳ್ಳಲು ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರನ್ನು ಸ್ವಾಗತಿಸಲು ಕೇರಳ ಪ್ರವಾಸೋದ್ಯಮ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಪ್ರಸ್ತುತ ನೀಲಿ-ನೇರಳೆ ಬಣ್ಣದ ಹೊದಿಕೆಯನ್ನು ಹೊದ್ದುಕೊಂಡಂತೆ ಕಂಗೊಳಿಸುತ್ತಿರುವ ಮುನ್ನಾರ್ನ ಬೆಟ್ಟಗಳು ಪ್ರಕೃತಿ ಪ್ರೇಮಿಗಳು ಹಾಗೂ ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ.
- Advertisement -


