Monday, September 7, 2026
Homeಕರಾವಳಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹಾಕಿದ ಸಿಸಿ ಕ್ಯಾಮರಾಗಳು ಕಣ್ಮರೆ; ಸಮಗ್ರ ಪರಿಶೀಲನೆಗೆ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹಾಕಿದ ಸಿಸಿ ಕ್ಯಾಮರಾಗಳು ಕಣ್ಮರೆ; ಸಮಗ್ರ ಪರಿಶೀಲನೆಗೆ ಗಣಿ ಇಲಾಖೆಯಿಂದ ಆದೇಶ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳು ಸಾಗಣೆಗೆ ತಡೆಹಾಕಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸುಮಾರು 30 ಆಯಕಟ್ಟಿನ ಸ್ಥಳಗಳಲ್ಲಿ ಸೋಲಾರ್ ವಿದ್ಯುತ್ ಚಾಲಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಿತ್ತು. ಈ ಪೈಕಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 26 ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ 4 ಕಡೆಗಳಲ್ಲಿ ವಿಶೇಷವಾಗಿ ಕಬ್ಬಿಣದ ಪೆಟ್ಟಿಗೆ ಸಹಿತ ಕಂಬಗಳಿಟ್ಟು ಭದ್ರವಾಗಿ ಕ್ಯಾಮರಾಗಳನ್ನು ಜೋಡಿಸಲಾಗಿತ್ತು.

ಬಂಟ್ವಾಳ ಗ್ರಾಮಾಂತರ, ಕೋಣಾಜೆ, ಉಳ್ಳಾಲ, ಮೂಲ್ಕಿ, ಮಂಗಳೂರು ಗ್ರಾಮಾಂತರ, ಕಂಕನಾಡಿ, ಬಜಪೆ ಹಾಗೂ ಕಾವೂರು ಠಾಣಾ ವ್ಯಾಪ್ತಿಯ ಪ್ರಮುಖ ಸೇತುವೆ, ಕಡವು, ಚರ್ಚ್, ಮಸೀದಿ ಹಾಗೂ ಬಸ್ ನಿಲ್ದಾಣಗಳ ಸಮೀಪದ ಅಡ್ಯಾರ್, ವಳಚ್ಚಿಲ್, ಹರೇಕಳ, ಕಣ್ಣೂರು, ಅದ್ಯಪಾಡಿ ಮತ್ತು ಪಡುಶೆಡ್ಡೆ ಸೇರಿದಂತೆ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಇವುಗಳನ್ನು ನಿಯೋಜಿಸಲಾಗಿತ್ತು.

ಆದರೆ, ಇತ್ತೀಚೆಗೆ ಹಲವು ಕಡೆಗಳಲ್ಲಿ ಕ್ಯಾಮರಾಗಳು ಮಾಯವಾಗಿ ಬರಿ ಕಂಬಗಳು ಮಾತ್ರ ಉಳಿದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಗಣಿ ಇಲಾಖೆಯು ಜಿಲ್ಲೆಯಾದ್ಯಂತ ಎಲ್ಲ ಕ್ಯಾಮರಾಗಳ ಪ್ರಸ್ತುತ ಸ್ಥಿತಿಗತಿಯನ್ನು ತಿಳಿಯಲು ಸಮಗ್ರ ಪರಿಶೀಲನೆ ಆರಂಭಿಸಿದೆ. ಈ ರೀತಿ ಕ್ಯಾಮರಾಗಳನ್ನು ಕಳವು ಮಾಡಿ ಹಾನಿ ಮಾಡಿರುವ ಹಿಂದೆ ಮರಳು ಮಾಫಿಯಾದ ಹಸ್ತಕ್ಷೇಪವಿದೆಯೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದನ್ನು ಇಲಾಖೆಯು ಸೂಕ್ತ ತನಿಖೆ ನಡೆಸಿ ಶೀಘ್ರವೇ ಸತ್ಯಾಸತ್ಯತೆಯನ್ನು ಹೊರತರಬೇಕೆಂಬ ಸಾರ್ವಜನಿಕ ಒತ್ತಾಯ ತೀವ್ರಗೊಂಡಿದೆ.

- Advertisement -

Latest News

error: Content is protected !!