Monday, September 7, 2026
Homeತಾಜಾ ಸುದ್ದಿಜೈಲು ವಾರ್ಡರ್‌ ಮೇಲೆ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಹಲ್ಲೆ

ಜೈಲು ವಾರ್ಡರ್‌ ಮೇಲೆ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಹಲ್ಲೆ

- Advertisement -
- Advertisement -

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಬಳಕೆಯ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಂಬ ಕೋಪಕ್ಕೆ, ಜೈಲಿನ ವಾರ್ಡರ್ ಮಂಜುನಾಥ್‌ ಹವೇಲಿ ಎಂಬುವವರ ಮೇಲೆ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅವಧಿಪೂರ್ವ ಬಿಡುಗಡೆಯಾಗುವ ಕೈದಿಗಳ ಹೆಸರು ನೋಂದಾಯಿಸಲು ಸೆ. 2ರಂದು ಬ್ಯಾರಕ್‌ಗೆ ತೆರಳಿದ್ದ ವಾರ್ಡರ್ ಅವರನ್ನು ಎಳೆದೊಯ್ದು, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಕಾರಾಗೃಹದ ಪ್ರಭಾರ ಅಧೀಕ್ಷಕ ಮಂಜುನಾಥ್‌ ನೀಡಿದ ದೂರಿನನ್ವಯ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಮಂಗಳೂರಿನ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್‌ ಮುಜಾಮಿಲ್‌, ಅಬ್ದುಲ್‌ ಶಫಾನ್‌, ಮೊಹಮ್ಮದ್‌ ರಿಜ್ವಾನ್‌, ನಯಾಜ್‌ ಹಾಗೂ ಖಲಂದರ್‌ಶಫಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇತ್ತೀಚೆಗೆ ಬ್ಯಾರಕ್ ಸ್ಥಳಾಂತರದ ವೇಳೆ ಆರೋಪಿ ಬಳಿಯಿದ್ದ ನಿಷೇಧಿತ ವಸ್ತುಗಳನ್ನು ಅಧಿಕಾರಿಗಳಿಗೆ ವರದಿ ಮಾಡಿದ್ದೇ ಈ ಹಲ್ಲೆಗೆ ಕಾರಣ ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!