Sunday, September 6, 2026
Homeಕರಾವಳಿಉಡುಪಿಕಾರ್ಕಳ: ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು

ಕಾರ್ಕಳ: ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು

- Advertisement -
- Advertisement -

ಕಾರ್ಕಳ: ತಾಲೂಕಿನ ನೀರೆ ಗ್ರಾಮದ ಬಾದಾಮಿಕಟ್ಟೆಯಲ್ಲಿ ಬಂದ್ ಆಗಿದ್ದ ಬಾಡಿಗೆ ಮನೆಯೊಂದರ ಬಾಗಿಲು ಮುರಿದು ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿದ ಘಟನೆ ನಡೆದಿದೆ.

ನಿವಾಸಿ ಪ್ರಶಾಂತ ಅವರು ಸೆ. 4ರಂದು ರಾತ್ರಿ ಪತ್ನಿಯ ಮನೆಗೆ ತೆರಳಿದ್ದ ವೇಳೆ ಈ ಕಳವು ನಡೆದಿದೆ. ಸೆ. 5ರಂದು ಬೆಳಗ್ಗೆ ವಾಪಸ್ ಬಂದಾಗ ಮನೆಯ ಮೇಲ್ಚಾವಣಿಯ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು, ಸುಮಾರು 11 ಗ್ರಾಂ ಚಿನ್ನ ಹಾಗೂ 55 ಗ್ರಾಂ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

- Advertisement -

Latest News

error: Content is protected !!