Tuesday, September 1, 2026
Homeಕರಾವಳಿಉಡುಪಿಸಮುದ್ರದಲ್ಲಿ ಮುಳುಗಿದ್ದ 30 ಲಕ್ಷ ರೂಪಾಯಿ ಮೌಲ್ಯದ ಮೀನುಗಾರಿಕಾ ಬಲೆ; 34 ಜನರಿದ್ದ ಮೀನುಗಾರರ ತಂಡದಿಂದ...

ಸಮುದ್ರದಲ್ಲಿ ಮುಳುಗಿದ್ದ 30 ಲಕ್ಷ ರೂಪಾಯಿ ಮೌಲ್ಯದ ಮೀನುಗಾರಿಕಾ ಬಲೆ; 34 ಜನರಿದ್ದ ಮೀನುಗಾರರ ತಂಡದಿಂದ ಸಾಹಸಿಕ ಕಾರ್ಯಾಚರಣೆ

- Advertisement -
- Advertisement -

ಕುಂದಾಪುರ: ಗಂಗೊಳ್ಳಿ ನದೀಮುಖ ಪ್ರದೇಶದಲ್ಲಿ ಆಗಸ್ಟ್ 26ರಂದು ‘ಶ್ರೀ ಬಾಲಾಂಜನೇಯ’ ದೋಣಿ ಅಪಘಾತಕ್ಕೀಡಾದಾಗ ಸಮುದ್ರದಲ್ಲಿ ಮುಳುಗಿದ್ದ 30 ಲಕ್ಷ ರೂಪಾಯಿ ಮೌಲ್ಯದ ಮೀನುಗಾರಿಕಾ ಬಲೆಯನ್ನು ಯಶಸ್ವಿಯಾಗಿ ದಡಕ್ಕೆ ತರಲಾಗಿದೆ.

ಕಾಂಚನಗಂಗಾ ದೋಣಿಯ ಮಾಲೀಕ ಚಂದ್ರ ಖಾರ್ವಿ ಅವರು ನೀಡಿದ ನಿಖರ ಸುಳಿವು ಆಧರಿಸಿ, ಗಂಗೊಳ್ಳಿಯ ದಿನೇಶ್ ಖಾರ್ವಿ ಅವರ ನಾಯಕತ್ವದಲ್ಲಿ 34 ಜನರಿದ್ದ ಮೀನುಗಾರರ ತಂಡ ಸಾಹಸಿಕ ಕಾರ್ಯಾಚರಣೆ ನಡೆಸಿತು. ಗಂಗೊಳ್ಳಿ ಬಂದರಿನಿಂದ ಪರ್ಸ್ ಸೀನ್ ದೋಣಿಯಲ್ಲಿ ತೆರಳಿದ್ದ ಈ ತಂಡ, ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ಆಳ ಸಮುದ್ರದಲ್ಲೇ ಬಿಡುವಿಲ್ಲದೆ ಶ್ರಮಿಸಿ ಬಲೆಯನ್ನು ಹುಡುಕುವಲ್ಲಿ ಯಶಸ್ವಿಯಾಯಿತು.

ಸಮುದ್ರದ ಅಡಿಯಲ್ಲಿದ್ದ ಸುಮಾರು 700 ವಾರ (ಯಾರ್ಡ್‌) ಉದ್ದದ ಈ ಬೃಹತ್ ಬಲೆಯನ್ನು ದಡಕ್ಕೆ ತಂದು, ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.

- Advertisement -

Latest News

error: Content is protected !!