Monday, August 31, 2026
Homeಕರಾವಳಿಉಡುಪಿಕಾರ್ಕಳ;  ಖಾಸಗಿ ತರಬೇತಿ ವಿಮಾನ ಪತನದಲ್ಲಿ ಟ್ರೈನಿ ಪೈಲೆಟ್ ಅಭಿಷೇಕ್ ಪೂಜಾರಿ ಸಾವು ಪ್ರಕರಣ; ಸ್ವಗ್ರಾಮ...

ಕಾರ್ಕಳ;  ಖಾಸಗಿ ತರಬೇತಿ ವಿಮಾನ ಪತನದಲ್ಲಿ ಟ್ರೈನಿ ಪೈಲೆಟ್ ಅಭಿಷೇಕ್ ಪೂಜಾರಿ ಸಾವು ಪ್ರಕರಣ; ಸ್ವಗ್ರಾಮ ಕಣಂಜಾರು ಮೂಲ ಮನೆಯಲ್ಲಿ ಅಭಿಷೇಕ  ಅಂತ್ಯಕ್ರಿಯೆ

- Advertisement -
- Advertisement -

ಕಾರ್ಕಳ; ಕಾನ್ಪುರದಲ್ಲಿ  ಖಾಸಗಿ ತರಬೇತಿ ವಿಮಾನ ಪತನದಲ್ಲಿ ಸಾವನ್ನಪ್ಪಿದ ಟ್ರೈನಿ ಪೈಲೆಟ್ ಅಭಿಷೇಕ್ ಪೂಜಾರಿ ಅವರ ಅಂತ್ಯಕ್ರಿಯೆ ಭಾನುವಾರ ಅವರ ಸ್ವಗ್ರಾಮ ಕಣಂಜಾರು ಮೂಲ ಮನೆಯಲ್ಲಿ ನಡೆಯಿತು.

ಅಭಿಷೇಕ್ ಕಾನ್ಪುರದಲ್ಲಿ ಸುಮಾರು ಎರಡೂವರೆ ವರ್ಷಗಳಿಂದ ಪೈಲೆಟ್ ತರಬೇತಿ ಪಡೆಯುತ್ತಿದ್ದರು. ಅವರ ಮೃತದೇಹವನ್ನು ವಿಮಾನದ ಮೂಲಕ ಮಂಗಳೂರಿಗೆ ತರಲಾಗಿತ್ತು. ಬಳಿಕ ಕಣಂಜಾರು ಕಡೆಬೆರ್ಕೆ ಮೂಲ ಮನೆಗೆ ಕೊಂಡೊಯ್ದು, ಮಧ್ಯಾಹ್ನ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಅಂತ್ಯಸಂಸ್ಕಾರ ನೆರವೇರಿತು. ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಸ್ಥಳೀಯ ಪ್ರಮುಖರಾದ ವಿಕ್ರಂ ಹೆಗ್ಡೆ ಕಣಂಜಾರು, ಸಚ್ಚಿದಾನಂದ ಪ್ರಭು ಸೇರಿದಂತೆ ಸ್ಥಳೀಯ ಗಣ್ಯರು ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

- Advertisement -

Latest News

error: Content is protected !!