Monday, September 7, 2026
Homeಕರಾವಳಿಮಂಗಳೂರುಮಂಗಳೂರು; ಶ್ರೀ ಶಿರಿಡಿ ಸಾಯಿಬಾಬಾ ಮಂದಿರದ ನೂತನ ಅಧ್ಯಕ್ಷರಾಗಿ ಸುಧಾಕರ್ ಬಂಗೇರ ಆಯ್ಕೆ

ಮಂಗಳೂರು; ಶ್ರೀ ಶಿರಿಡಿ ಸಾಯಿಬಾಬಾ ಮಂದಿರದ ನೂತನ ಅಧ್ಯಕ್ಷರಾಗಿ ಸುಧಾಕರ್ ಬಂಗೇರ ಆಯ್ಕೆ

- Advertisement -
- Advertisement -

ಮಂಗಳೂರು: ಸೂರಿಂಜೆಯ ಪುಚ್ಚಾಡಿಯಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದ 2026-2028ನೇ ಸಾಲಿನ ನೂತನ ಅಧ್ಯಕ್ಷರಾಗಿ ಪುಚ್ಚಾಡಿಯ ಶ್ರೀ ಸುಧಾಕರ್ ಬಂಗೇರ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕಳೆದ 12 ವರ್ಷಗಳಿಂದ ಶ್ರೀ ಶಿರಿಡಿ ಸಾಯಿಬಾಬಾರವರ ಕೃಪಾಶೀರ್ವಾದದೊಂದಿಗೆ ಭಕ್ತಾದಿಗಳ ಮತ್ತು ಸಮಾಜದ ಸೇವೆಯಲ್ಲಿ ಈ ಮಂದಿರವು ನಿರಂತರವಾಗಿ ತೊಡಗಿಸಿಕೊಂಡಿದೆ. ಮಂದಿರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ, ಶೈಕ್ಷಿಣಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಮಂದಿರದ ಸೇವಾ ಕಾರ್ಯಗಳ ಅಂಗವಾಗಿ ಪ್ರತಿ ಗುರುವಾರ ಶ್ರೀ ಶಿರಿಡಿ ಸಾಯಿಬಾಬಾರವರಿಗೆ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಸೇವೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಪವಿತ್ರ ಸೇವೆಗೆ “ಒಂದು ಗುರುವಾರ – ಒಬ್ಬ ದಾನಿ – ಒಂದು ಪವಿತ್ರ ಸೇವೆ” ಎಂಬ ಪರಿಕಲ್ಪನೆಯಡಿಯಲ್ಲಿ ಭಕ್ತರು ಮತ್ತು ದಾನಿಗಳು ಒಂದು ದಿನದ ಸಂಪೂರ್ಣ ಪ್ರಾಯೋಜಕತ್ವ ವಹಿಸಿ ಸೇವಾ ದೇಣಿಗೆಯನ್ನು ನೀಡಬಹುದಾಗಿದೆ.

ಭಕ್ತಾದಿಗಳು ತಮ್ಮ ಕುಟುಂಬದ ಹೆಸರಿನಲ್ಲಿ, ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ, ಜನ್ಮದಿನ, ವಿವಾಹ ವಾರ್ಷಿಕೋತ್ಸವದ ನೆನಪಿಗೆ ಅಥವಾ ಅಗಲಿದ ಆತ್ಮೀಯರ ಸ್ಮರಣಾರ್ಥವಾಗಿ ಈ ಅನ್ನಸಂತರ್ಪಣೆ ಸೇವೆಯನ್ನು ಪ್ರಾಯೋಜಿಸಬಹುದಾಗಿದೆ.

ಈ ಕುರಿತು ಮಾತನಾಡಿರುವ ನೂತನ ಅಧ್ಯಕ್ಷ ಸುಧಾಕರ್ ಬಂಗೇರ ಅವರು, “ದಾನಿಗಳ ಮತ್ತು ಭಕ್ತರ ಅಮೂಲ್ಯ ಸಹಕಾರವು ಅನ್ನ ಸಂತರ್ಪಣೆ ಸೇವೆಯ ಜೊತೆಗೆ ಮಂದಿರವು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ, ಭಕ್ತಿಪರ, ಬಾಲಗೋಕುಲ, ಸಾಂಸ್ಕೃತಿಕ ಹಾಗೂ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಿಗೆ ದೊಡ್ಡ ಬೆಂಬಲ ಮತ್ತು ಪ್ರೇರಣೆಯಾಗಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇವಾ ಪ್ರಾಯೋಜಕತ್ವ ವಹಿಸಬೇಕು” ಎಂದು ವಿನಂತಿಸಿಕೊಂಡಿದ್ದಾರೆ.

- Advertisement -

Latest News

error: Content is protected !!