Monday, September 7, 2026
HomeUncategorizedಮೂಡುಬಿದಿರೆ: ಬ್ರೇಕ್ ಫೇಲಾಗಿ ಅಂಗಡಿ ಅಂಗಳಕ್ಕೆ ನುಗ್ಗಿದ ಲಾರಿ

ಮೂಡುಬಿದಿರೆ: ಬ್ರೇಕ್ ಫೇಲಾಗಿ ಅಂಗಡಿ ಅಂಗಳಕ್ಕೆ ನುಗ್ಗಿದ ಲಾರಿ

- Advertisement -
- Advertisement -

ಮೂಡುಬಿದಿರೆ: ತಾಲೂಕಿನ ತೋಡಾರು ಕೊಡಮಣಿತ್ತಾಯ ದ್ವಾರದ ಬಳಿ ಬ್ರೇಕ್ ಫೇಲ್ ಆದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಅಂಗಡಿಯ ಅಂಗಳಕ್ಕೆ ನುಗ್ಗಿದ ಘಟನೆ ಭಾನುವಾರ ನಡೆದಿದೆ.

ಯೆನೆಪೋಯ ಕಾಲೇಜಿನ ಗೇಟ್‌ನಿಂದ ಹೊರಬಂದು ಮುಖ್ಯರಸ್ತೆಗೆ ಬರುತ್ತಿದ್ದ ವೇಳೆ ಲಾರಿಯ ಬ್ರೇಕ್ ವಿಫಲವಾಗಿದೆ ಎನ್ನಲಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹಿಮ್ಮುಖವಾಗಿ ಚಲಿಸಿ ಸಮೀಪದ ಅಂಗಡಿಯ ಅಂಗಳಕ್ಕೆ ಬಿದ್ದಿದೆ. ಘಟನೆಯಿಂದ ಅಂಗಡಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

- Advertisement -

Latest News

error: Content is protected !!