ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೀಡಿದ ಮಾಹಿತಿಯಂತೆ, 19 ಕೆಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 9.50 ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಆದರೆ ಗೃಹ ಬಳಕೆದಾರರಿಗೆ ಬೆಲೆ ಏರಿಕೆಯಿಂದ ರಿಲೀಫ್ ಸಿಕ್ಕಿದ್ದು, 14 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಅದೇ ರೀತಿ, ಸಾಮಾನ್ಯ 5 ಕೆಜಿ ಮತ್ತು 10 ಕೆಜಿ ಗೃಹ ಬಳಕೆಯ ಸಿಲಿಂಡರ್ ಬೆಲೆಗಳೂ ಸ್ಥಿರವಾಗಿದ್ದು, 5 ಕೆಜಿ ಸಾಮಾನ್ಯ ಎಲ್ಪಿಜಿ ಸಿಲಿಂಡರ್ ಬೆಲೆ 349.50 ರೂ. ಹಾಗೂ 5 ಕೆಜಿ XTRALITE ಸಿಲಿಂಡರ್ ದರ 339 ರೂ.ಗಳಲ್ಲೇ ಮುಂದುವರಿದಿದೆ. ಆದರೆ 5 ಕೆಜಿ ವಾಣಿಜ್ಯೇತರ (Non-Domestic) ಸಿಲಿಂಡರ್ ಬೆಲೆ ಮಾತ್ರ 762 ರೂ. ನಿಂದ 764 ರೂ. ಗೆ ಏರಿಕೆಯಾಗಿದೆ. ಒಟ್ಟಾರೆಯಾಗಿ, ವಾಣಿಜ್ಯ ವಲಯಕ್ಕೆ ಸಿಲಿಂಡರ್ ದರ ಏರಿಕೆ ಶಾಕ್ ನೀಡಿದ್ದರೆ, ಗೃಹ ಬಳಕೆದಾರರಿಗೆ ದರ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಕೊಂಚ ನಿರಾಳತೆ ತಂದಿದೆ.


